ಇನ್ನು ಕಾಲಭೇದಂಗಳದೆಂತೆಂದಡೆ:
ಪ್ರಥಮಕಾಲದಲ್ಲಿ ಹುಟ್ಟಿದ ಮಗನು ಕೋಪಿಯಹನು.
ದ್ವಿತೀಯಕಾಲದಲ್ಲಿ ಹುಟ್ಟಿದ ಮಗನು ಪಾಪಕರ್ಮಾಶ್ರಯವಾಗಿಹನು.
ತೃತೀಯಕಾಲದಲ್ಲಿ ಹುಟ್ಟಿದ ಮಗನು ಪಾಪಿಯಹನು.
ಅಸ್ತಮಯವಾದ ಎಂಟು ಘಳಿಗೆಗೆ ಹುಟ್ಟಿದ ಮಗನು ಜ್ಞಾನಿಯಹನು.
ಮಧ್ಯರಾತ್ರಿಯಲ್ಲಿ ಹುಟ್ಟಿದ ಮಗನು
ಶಾಂತಿ ದಾಂತಿ ಸಮತೆಯುಳ್ಳ ಪುರುಷನಹನು.
ಬೆಳಗಾಗುವ ಜಾವದಲ್ಲಿ ಹುಟ್ಟಿದ ಮಗನು ಪರಮಯೋಗಿಯಹನು ನೋಡಾ
ಅಪ್ರಮಾಣಕೂಡಲಸಂಗಮದೇವಾ.