ಇನ್ನು ಸ್ತ್ರೀ ಪುರುಷರುಗಳ ಕೂಟದ ಸ್ವರಭೇದವದೆಂತೆಂದಡೆ:
ಸ್ತ್ರೀಪುರುಷರ ಸಂಯೋಗ ಕಾಲದಲ್ಲಿ
ಸ್ತ್ರೀಗೆ ಅಪಾನವಾಯು ಇದಿರಾದರೆ ಮಕ್ಕಳು ಇಬ್ಬರು ಹುಟ್ಟುವರು.
ಪುರುಷರಿಗೆ ಶಶಿಸ್ವರ, ಸ್ತ್ರೀಗೆ ರವಿಸ್ವರವಾದರೆ ಪುರುಷ ಹುಟ್ಟುವನು.
ಸ್ತ್ರೀಗೆ ಶಶಿಸ್ವರ, ಪುರುಷಗೆ ರವಿಸ್ವರವಾದರೆ ಸ್ತ್ರೀ ಹುಟ್ಟುವಳು.
ಸ್ತ್ರೀ ಪುರುಷರಿಬ್ಬರಿಗೆಯೂ ಸ್ವರಸಂಚಲವಿಲ್ಲದೆ ಇದ್ದರೆ ಗರ್ಭ ಉಂಟು.
ಸ್ತ್ರೀಪುರುಷರಿಬ್ಬರಿಗೆಯೂ ಸ್ವರಸಂಚಲವಾದರೆ ಗರ್ಭವಿಲ್ಲ.
ಪುರುಷಂಗಗ್ನಿಸ್ವರ ವಿಶೇಷವಾದರೆ ಬಂಜೆಯಹಳು ನೋಡಾ
ಅಪ್ರಮಾಣಕೂಡಲಸಂಗಮದೇವಾ.