ಏಕರಾತ್ರಿಗೆ ಹಾಲಿಗೆ ಹೆಪ್ಪ ಕೊಟ್ಟ ಹಾಗೆ ಕದಡಿಕೊಂಡಿಹುದು.
ಪಂಚರಾತ್ರಿಗೆ ಬುದ್ಬುಧಾಕಾರವಾಗಿಹುದು.
ದಶರಾತ್ರಿಗೆ ಶೋಣಿತವಾಗಿಹುದು.
ತ್ರಿಪಂಚರಾತ್ರಿಗೆ ಮಾಂಸ ಅಸ್ಥಿಯಾಗಿಹುದು.
ಚತುರ್ವಿಂಶತಿರಾತ್ರಿಗೆ ಪುನರ್ಮಾಂಸವಾಗಿ
ಗರ್ಭಸ್ಥಾನದಲ್ಲಿ ಕ್ರಮದಿಂದ ವರ್ತಿಸುತ್ತಿಹುದು ನೋಡಾ.
ಇದಕ್ಕೆ ಈಶ್ವರ ಉವಾಚ:
ಕಲಲಂ ತ್ವೇಕರಾತ್ರೇಣ ಪಂಚರಾತ್ರೇಣ ಬುದ್ಬುಧಂ |
ಶೋಣಿತಂ ದಶರಾತ್ರೇಣ ಮಾಂಸಪಿಂಡಂ ತ್ರಿಪಂಚ ತೇ |
ಪೂರ್ಣಿಮಾಂಸಶ್ಚ ವಿಂಶಾಯೇ ಗರ್ಭೇನಾ ವರ್ಧತೇ ಕ್ರಮಾತ್ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ēkarātrige hālige heppa koṭṭa hāge kadaḍikoṇḍ'̔ihudu.
Pan̄carātrige budbudhākāravāgihudu.
Daśarātrige śōṇitavāgihudu.
Tripan̄carātrige mānsa asthiyāgihudu.
Caturvinśatirātrige punarmānsavāgi
garbhasthānadalli kramadinda vartisuttihudu nōḍā.
Idakke īśvara uvāca:
Kalalaṁ tvēkarātrēṇa pan̄carātrēṇa budbudhaṁ |
śōṇitaṁ daśarātrēṇa mānsapiṇḍaṁ tripan̄ca tē |
pūrṇimānsaśca vinśāyē garbhēnā vardhatē kramāt ||''
intendudāgi,
Apramāṇakūḍalasaṅgamadēvā.