Index   ವಚನ - 252    Search  
 
ಆ ಚೈತನ್ಯಬೀಜ ಶುಕ್ಲಶೋಣಿತ ಬಲಿತು ಜೀವನಾಗಿ ಭೂತಂಗಳ ಕೂಡಿಕೊಂಡು ಕರ್ಮವಶದಿಂದ ಪಿಂಡವಹುದು. ಇದಕ್ಕೆ ಶ್ರುತಿ: ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ | ಪಂಚೈತಾನಿ ವಿಲಿಖ್ಯಂತೇ ಗರ್ಭಸ್ತಸ್ಯೈವ ದೇಹಿನಾಂ ||'' ಇಂತೆಂದುದಾಗಿ, ಈ ಪಂಚಾಕ್ಷರವ ನಿಟಿಲತಟದಲ್ಲಿ ಬರೆವನು. ಆ ಚೈತನ್ಯಬೀಜ ಶುಕ್ಲಶೋಣಿತಂಗಳು ಬದ್ಧವಹುದು. ಪುರುಷವೀರ್ಯ ಘನವಾದಡೆ ಗಂಡುಮಗ ಹುಟ್ಟುವನು. ಸ್ತ್ರೀವೀರ್ಯ ಘನವಾದಡೆ ಹೆಣ್ಣು ಮಗು ಹುಟ್ಟುವಳು. ಸಮವಾದಡೆ ನಪುಂಸಕ ಹುಟ್ಟುವದು. ಮಾತಾಪಿತರ ಮಲತ್ರಯದಲ್ಲಿ ಪಿಂಡರೂಪವಹುದು. ಇದಕ್ಕೆ ಶ್ರೀಮಹಾದೇವ ಉವಾಚ: ``ರಕ್ತಾಧಿಕ್ಯಂ ಭವೇನ್ನಾರೀ ನರಶುಕ್ಲಾಧಿಕೇ ಸುತಂ | ನಪುಂಸಕಂ ಸಮಂ ದ್ರವ್ಯೈಃ ತ್ರಿವಿಧಂ ಪಿಂಡರೂಪಕಂ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.