Index   ವಚನ - 259    Search  
 
ಸುಕರ್ಮದಿಂದ ದೇವತಾಯೋನಿಯಲ್ಲಿ ಜನಿಸುವನು. ದುಷ್ಕರ್ಮದಿಂದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳ ಕ್ರೂರಯೋನಿಯಲ್ಲಿ ಜನಿಸುವನು. ಸುಕರ್ಮ ದುಷ್ಕರ್ಮ ಎರಡರ ಮಿಶ್ರಣದಿಂದ ಮನುಜಯೋನಿಯಲ್ಲಿ ಜನಿಸುವನು. ಇಂತಪ್ಪ ಸುಕರ್ಮ ದುಷ್ಕರ್ಮಗಳು ಪೂರ್ವಕರ್ಮವಶದಿಂದ ಬಹವು ನೋಡಾ. ಇದಕ್ಕೆ ಸೂತಸಂಹಿತಾಯಾಂ: ಪುಣ್ಯಾದ್ದೇವತ್ವಮಾಪ್ನೋತಿ ಪಾಪಾತ್ ಸ್ಥಾವರತಾಮಿಯಾತ್ | ಸಮಾಭ್ಯಾಂ ಪಾಪಪುಣ್ಯಾಭ್ಯಾಂ ಮಾನುಷ್ಯೇ ಪರಿರ್ವರ್ತತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.