Index   ವಚನ - 271    Search  
 
ಇನ್ನು ನಾಡಿಧಾರಣವೆಂತೆಂದಡೆ: ಎಪ್ಪತ್ತೆರಡು ಸಾವಿರ ನಾಡಿಗಳೊಳು ಮೂವತ್ತೆರಡು ನಾಡಿ ಮುಖ್ಯವಾಗಿಹುದು. ಆ ಮೂವತ್ತೆರಡು ನಾಡಿಗಳೊಳು ಚತುರ್ದಶನಾಡಿಗಳು ಪ್ರಧಾನನಾಡಿಗಳಾಗಿಹವು. ಆ ಚತುರ್ದಶನಾಡಿಗಳೊಳು ಮೂರುನಾಡಿ ಮುಖ್ಯವಾಗಿಹುದು. ಆ ಮೂರು ನಾಡಿಗಳೊಳು ಒಂದುನಾಡಿ ಮುಖ್ಯವಾಗಿಹುದು. ಆ ಒಂದು ನಾಡಿಯ ಯೋಗಿಗಳು ಬ್ರಹ್ಮನಾಡಿಯೆಂಬರು ನೋಡಾ ಅಪ್ರಮಾಣಕೂಡಲಸಂಗಮದೇವಾ.