ಇಂತಪ್ಪ ನಾನಾ ಸುಖದುಃಖಂಗಳನುಂಡು,
ಎಂತಕ್ಕೆ ನರನಾಗಿ ಬಂದು,
ಪೂರ್ವಜನ್ಮಸುಕೃತಫಲದಿಂದ ಮಹಾಪುರುಷರಂ ಸಾರ್ದು
ನರಕೋತ್ತರವಂ ಮಾಡಿ, ಸ್ವರ್ಗಾದಿ ಭೋಗಂಗಳನುಂಡು,
ಮೇಲಣ ಮುಕ್ತಿಯ ಪಥವನು ಪಡೆದ ತೆರನಾವುದೆಂದು ವಿಚಾರಿಸಿ,
ಸಕಲವೇದಾಗಮಶಾಸ್ತ್ರಪುರಾಣಂಗಳಂ ನೋಡಿ
ತನ್ನಿಂದ ತಾನೆ ತಿಳಿದು ಅನಂತಕೋಟಿ ತತ್ವಂಗಳೊಳು
ತೊಂಬತ್ತಾರುತತ್ತ್ವಂಗಳನರಿದು, ಆ ತೊಂಬತ್ತಾರುತತ್ತ್ವಂಗಳೊಳು
ಮೂವತ್ತಾರುತತ್ತ್ವಂಗಳ ಭೇದಿಸಿ,
ಆ ಮೂವತ್ತಾರು ತತ್ತ್ವಂಗಳೊಳು
ತ್ವಂ ಪದ ತತ್ಪದ ಅಸಿಪದಂಗಳೆಂಬ ಪದತ್ರಯಂಗಳನರಿದು
ಎಪ್ಪತ್ತೆರಡುಸಾವಿರ ನಾಡಿಗಳನು
ಆ ಎಪ್ಪತ್ತೆರಡುಸಾವಿರ ನಾಡಿಗಳೊಳು ಮೂವತ್ತೆರಡು ನಾಡಿಗಳ ಭೇದವನು,
ಆ ಮೂವತ್ತೆರಡು ನಾಡಿಗಳೊಳು ಚತುರ್ದಶನಾಡಿಗಳ ಭೇದವನು,
ಆ ಚತುರ್ದಶನಾಡಿಗಳೊಳು ತ್ರಿನಾಡಿಗಳ ಭೇದವನು,
ಆ ತ್ರಿನಾಡಿಗಳೊಳು ಏಕನಾಡಿಯ ಭೇದವನರಿದು
ಆ ಚತುರ್ದಶನಾಡಿಗಳೊಳು ಚತುರ್ದಶವಾಯುಭೇದವನರಿದು
ಆ ಚತುರ್ದಶವಾಯುವಿನೊಳು ಪಂಚವಾಯುವ ಭೇದಿಸಿ,
ಪಂಚವಾಯುವಿನೊಳು ದ್ವಿವಾಯುವನರಿದು,
ದ್ವಿವಾಯುವಿನೊಳು ಏಕವಾಯುವಿನ ಸಂಚವನರಿದು
ಷಡುಚಕ್ರ, ದಶವರ್ಣ, ಅಕ್ಷರ, ಅಧಿದೇವತೆಗಳಂ ಭೇದಿಸಿ
ಅಂತಃಕರಣಚತುಷ್ಟಯಂಗಳನರಿದು
ಮಂಡಲತ್ರಯಭೇದವ ಭೇದಿಸಿ ಕಂಡನು ಕಾಣಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Intappa nānā sukhaduḥkhaṅgaḷanuṇḍu,
entakke naranāgi bandu,
pūrvajanmasukr̥taphaladinda mahāpuruṣaraṁ sārdu
narakōttaravaṁ māḍi, svargādi bhōgaṅgaḷanuṇḍu,
mēlaṇa muktiya pathavanu paḍeda teranāvudendu vicārisi,
sakalavēdāgamaśāstrapurāṇaṅgaḷaṁ nōḍi
tanninda tāne tiḷidu anantakōṭi tatvaṅgaḷoḷu
tombattārutattvaṅgaḷanaridu, ā tombattārutattvaṅgaḷoḷu
mūvattārutattvaṅgaḷa bhēdisi,
Ā mūvattāru tattvaṅgaḷoḷu
tvaṁ pada tatpada asipadaṅgaḷemba padatrayaṅgaḷanaridu
eppatteraḍusāvira nāḍigaḷanu
ā eppatteraḍusāvira nāḍigaḷoḷu mūvatteraḍu nāḍigaḷa bhēdavanu,
ā mūvatteraḍu nāḍigaḷoḷu caturdaśanāḍigaḷa bhēdavanu,
ā caturdaśanāḍigaḷoḷu trināḍigaḷa bhēdavanu,
ā trināḍigaḷoḷu ēkanāḍiya bhēdavanaridu
ā caturdaśanāḍigaḷoḷu caturdaśavāyubhēdavanaridu
ā caturdaśavāyuvinoḷu pan̄cavāyuva bhēdisi,
pan̄cavāyuvinoḷu dvivāyuvanaridu,
Dvivāyuvinoḷu ēkavāyuvina san̄cavanaridu
ṣaḍucakra, daśavarṇa, akṣara, adhidēvategaḷaṁ bhēdisi
antaḥkaraṇacatuṣṭayaṅgaḷanaridu
maṇḍalatrayabhēdava bhēdisi kaṇḍanu kāṇā
apramāṇakūḍalasaṅgamadēvā.