Index   ವಚನ - 279    Search  
 
ಇನ್ನು ವಾಯುಧಾರಣೆ ಎಂತೆಂದಡೆ: ಚತುರ್ದಶವಾಯುಗಳೊಳು ಪಂಚವಾಯುವೆ ಮುಖ್ಯವಾಗಿಹುದು. ಆ ಪಂಚವಾಯುವಿನೊಳು ದ್ವಿವಾಯುವೆ ಮುಖ್ಯವಾಗಿಹುದು. ಆ ದ್ವಿವಾಯುವಿನೊಳು ಏಕವಾಯುವೆ ಮುಖ್ಯವಾಗಿಹುದು. ಆ ಏಕವಾಯುವೆ ಚತುರ್ದಶವಾಯುವಾಗಿ ಚರಿಸುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.