ಸ್ವಾಧಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕು ಸಾಧಿಸಿ,
ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು,
ಅಲ್ಲಿ ಪಚ್ಚೆಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ
ಮನ ಪವನ ಬಿಂದುವಂ ಏಕೀಕರಿಸಿ
ನಾಭಿಚಕ್ರಕ್ಕೆ ನೆಗೆದನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Svādhiṣṭhānacakrada ṣaḍudaḷapadmava pokku sādhisi,
alliha mantra-pada-varṇa-bhuvana-tatva-kalegaḷaṁ kaṇḍu,
alli pacceyavarṇavāgiha jyōtirmayaliṅgamaṁ berasi
mana pavana binduvaṁ ēkīkarisi
nābhicakrakke negedanu nōḍā
apramāṇakūḍalasaṅgamadēvā.