Index   ವಚನ - 300    Search  
 
ಆ [ವಿಶುದ್ದಿಚಕ್ರದ] ಷೋಡಶದಳಪದ್ಮವ ಪೊಕ್ಕುನೋಡಿ ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಅಲ್ಲಿ ಶ್ವೇತವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ, ಮನ-ಪವನ-ಬಿಂದು ಸಂಯೋಗದಿಂದ ಆಜ್ಞಾಚಕ್ರದ ದ್ವಿದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.