ಓಂಕಾರದ ಪೀಠದ ಮೇಲೆ
ನಿಶ್ಶಬ್ದವೆಂಬ ಲಿಂಗವ ನೆಲೆಗೊಳಿಸಿ,
ನಿರಾಮಯದಲ್ಲಿ ನಿಂದು
ನಿರಾಳನಾಗಿಹುದೇ ನಿರಾಧಾರಪೂಜೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ōṅkārada pīṭhada mēle
niśśabdavemba liṅgava nelegoḷisi,
nirāmayadalli nindu
nirāḷanāgihudē nirādhārapūje nōḍā
apramāṇakūḍalasaṅgamadēvā.