ಮತ್ತಂ, ಆ ಶಿಷ್ಯನ ಸ್ತೋತ್ರ:
ಶ್ರೀಗುರುವೆ ಮಹಾದೇವ, ಮಹಾಗುರುವೆ ಸದಾಶಿವನು,
ಶ್ರೀಗುರುವೆ ಪರತತ್ವ, ಶ್ರೀಗುರುವೆ ಪರಬ್ರಹ್ಮವೆಂದರಿದು
ನಿಮ್ಮ ಮೊರೆಹೊಕ್ಕೆನು,
ಎನ್ನ ಭವಸಾಗರವ ದಾಂಟಿಸಿ,
ಎನ್ನ ಕರಕಮಲಕ್ಕೆ ಇಷ್ಟಲಿಂಗವ ಕರುಣಿಸಿ
ರಕ್ಷಿಸಾ ಶ್ರೀಗುರುವೆ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Mattaṁ, ā śiṣyana stōtra:
Śrīguruve mahādēva, mahāguruve sadāśivanu,
śrīguruve paratatva, śrīguruve parabrahmavendaridu
nim'ma morehokkenu,
enna bhavasāgarava dāṇṭisi,
enna karakamalakke iṣṭaliṅgava karuṇisi
rakṣisā śrīguruve
apramāṇakūḍalasaṅgamadēvā