Index   ವಚನ - 312    Search  
 
ಮತ್ತಂ, ಆ ಶಿಷ್ಯನ ಪ್ರಲಾಪವೆಂತೆಂದಡೆ: ಅಯ್ಯಾ, ಅನಂತ ಜನ್ಮದಲ್ಲಿ ಮಾಡಿದ ಪಾಪಂಗಳೆಂಬ ಪಂಕವ ನಿಮ್ಮ ಚಿದ್ವಾಕ್ಯಪ್ರಭೆಯಲ್ಲಿ ಮುಳುಗಿಸುವುದಯ್ಯ. ಎನ್ನ ಭವಾರಣ್ಯವ ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿರಿದು ಖಂಡಿಸುವುದಯ್ಯ. ಎನ್ನ ಭವರೋಗಂಗಳೆಂಬ ಕಾಷ್ಠಂಗಳ ನಿಮ್ಮ ಮಹಾಜ್ಞಾನಾಗ್ನಿಯಲ್ಲಿ ದಹಿಸುವುದಯ್ಯ. ಅಪ್ರಮಾಣಕೂಡಲಸಂಗಮದೇವಾ ಶಿವಧೋ ಶಿವಧೋ.