Index   ವಚನ - 322    Search  
 
ಸೂರ್ಯನ ಗ್ರಹಣದಂತೆ ಸರ್ವಗ್ರಹಣವಾಯಿತ್ತಯ್ಯಾ ಎನಗೆ. ಸಂಸಾರವೆಂಬ ರಾಹು ಸರ್ವಗ್ರಹಣವಾಗಿ ಹಿಡಿದು ನುಂಗಿತ್ತಯ್ಯಾ ಎನ್ನ. ಈ ಬೆಂದ ಸಂಸಾರ ಎಂದು ಸಮನಾಗಿ ಮೋಕ್ಷವಹುದೋ? ಇನ್ನೆಂದಿಂಗೆ ಪರಮಪದವಹುದೊ ಅಯ್ಯಾ ಅಪ್ರಮಾಣಕೂಡಲಸಂಗಮದೇವಾ?