Index   ವಚನ - 324    Search  
 
ಇನ್ನು ಮಾಯಾವಿಡಂಬನಸ್ಥಲವದೆಂತೆಂದಡೆ: ಮಾಯೆಗಂಜಿ ಕೌಪವ ಕಟ್ಟಿದವರು ಕೋಟಾನುಕೋಟಿ. ಮಾಯೆಗಂಜಿ ತಪೋವನವ ಹೊಕ್ಕವರು ಕೋಟಾನುಕೋಟಿ. ಮಾಯೆಗಂಜಿ ಪವನಾಶನವಾಗಿಹರು ಕೋಟಾನುಕೋಟಿ. ಮಾಯೆಗಂಜಿ ಗಿರಿಗಹ್ವರಂಗಳ ಹೊಕ್ಕವರು ಕೋಟಾನುಕೋಟಿ. ಮಾಯೆಗಂಜಿ ತರಗೆಲೆಗಳ ಮೆದ್ದವರು ಕೋಟಾನುಕೋಟಿ. ಇವರೆಲ್ಲರು ಮಾಯೆಯ ಬಾಯ ತುತ್ತಾದರು. ನಾನು ಮರ್ತ್ಯಕ್ಕೆ ಬಂದು ಪ್ರಭು ಬಸವಣ್ಣ ಮೊದಲಾದ ಅಸಂಖ್ಯಾತ ಗಣಂಗಳ ಪ್ರಸಾದವ ಕೊಂಡೆನಾಗಿ ಮಾಯಾತೀತನಾದೆ ಕಾಣಾ ಅಪ್ರಮಾಣಕೂಡಲಸಂಗಮದೇವಾ.