Index   ವಚನ - 341    Search  
 
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಕ್ಕೆ ಅಂಗತ್ರಯಂಗಳಾವಾವೆಂದಡೆ: ಸುಷುಪ್ತಾವಸ್ಥೆಯೇ ಯೋಗಾಂಗ ಸ್ವಪ್ನಾವಸ್ಥೆಯೇ ಭೋಗಾಂಗ ಜಾಗ್ರಾವಸ್ಥೆಯೇ ತ್ಯಾಗಾಂಗ ನೋಡಾ. ಇದಕ್ಕೆ ಈಶ್ವರೋsವಾಚ: ಸುಷುಪ್ಯವಸ್ಥಾ ಯೋಗಾಂಗಂ ಸ್ವಪ್ನಾವಸ್ಥೇನಾಭಿರು | ಜಾಗ್ರದಿತ್ಯುದಿತಾವಸ್ಥಾ ತ್ಯಾಗಾಂಗಮಿತಿ ಲಕ್ಷ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.