ಸಚ್ಚಿದಾನಂದಸ್ವರೂಪವಾಗಿಹ ಪರಬ್ರಹ್ಮನೆ
ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು.
ಅದೆಂತೆಂದಡೆ:
ಸತ್ತೇ ಭಾವಲಿಂಗ, ಚಿತ್ತೇ ಪ್ರಾಣಲಿಂಗ,
ಆನಂದವೇ ಇಷ್ಟಲಿಂಗ ನೋಡಾ.
ಇದಕ್ಕೆ ಈಶ್ವರೋsವಾಚ:
ಸಚ್ಚಿದಾನಂದರೂಪಂ ಚ ಇಷ್ಟಪ್ರಾಣಂತು ಭಾವಕಂ |
ಸತ್ತು ಸದ್ಭಾವಲಿಂಗಂ ಚ ಚಿತ್ತು ಚಿತ್ಪ್ರಾಣಲಿಂಗಕಂ |
ಆನಂದಂ ಇಷ್ಟಲಿಂಗಂ ಚ ಇತಿ ಭೇದಂ ವರಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Saccidānandasvarūpavāgiha parabrahmane
iṣṭa-prāṇa-bhāvavendu mūruteranāyittu.
Adentendaḍe:
Sattē bhāvaliṅga, cittē prāṇaliṅga,
ānandavē iṣṭaliṅga nōḍā.
Idakke īśvarōsvāca:
Saccidānandarūpaṁ ca iṣṭaprāṇantu bhāvakaṁ |
sattu sadbhāvaliṅgaṁ ca cittu citprāṇaliṅgakaṁ |
ānandaṁ iṣṭaliṅgaṁ ca iti bhēdaṁ varānanē ||''
intendudāgi,
apramāṇakūḍalasaṅgamadēvā.