Index   ವಚನ - 342    Search  
 
ಇನ್ನೊಂದು ಪ್ರಕಾರದ ಅಂಗತ್ರಯವೆಂತೆಂದಡೆ: ಪ್ರಾಜ್ಞಾತ್ಮನೆ ಯೋಗಾಂಗ, ತೈಜಸಾತ್ಮನೆ ಭೋಗಾಂಗ, ವಿಶ್ವಾತ್ಮನೆ ತ್ಯಾಗಾಂಗ. ಇದಕ್ಕೆ ಮಹಾದೇವ ಉವಾಚ: ಏ ಯೋಗಾಂಗಂ ಪ್ರಾಜ್ಞವಸ್ಯಾತ್ ಭೋಗಾಂಗಂ ತೈಜಸಾ ಭವೇತ್ | ತ್ಯಾಗಾಂಗಂ ವಿಶ್ವಮೇ ವಸ್ಯಾತ್ ಪರಮಾರ್ಥನಿರೂಪಣೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.