ಇನ್ನು ಇಷ್ಟ-ಪ್ರಾಣ-ಭಾವಲಿಂಗದ ಪೂಜೆಯ ವಿವರವೆಂತೆಂದಡೆ:
ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ
ಮಾಡುವದು ಇಷ್ಟಲಿಂಗದ ಪೂಜೆ.
ಆ ಲಿಂಗವನು ಮನಸ್ಸಿನಲ್ಲಿಯೇ
ಧ್ಯಾನಿಸುವದು ಪ್ರಾಣಲಿಂಗದ ಪೂಜೆ.
ಜೀವನೆಂಬ ಶಿವಾಲಯದೊಳು ಪ್ರಾಣಲಿಂಗವೇ ದೇವ ನೋಡಾ.
ಅಜ್ಞಾನವೆಂಬ ನಿರ್ಮಾಲ್ಯವಂ ಕಳದು
ಸೋಹಂ ಭಾವದಲ್ಲಿ ಪೂಜಿಸುತಿರ್ಪುದೆ
ಪ್ರಾಣಲಿಂಗಪೂಜೆ ನೋಡಾ.
ಇದಕ್ಕೆ ಈಶ್ವರೋsವಾಚ:
``ಅಷ್ಟವಿಧಾರ್ಚನಂ ಕುರ್ಯಾತ್ ಇಷ್ಟಲಿಂಗಸ್ಯ ಪೂಜನಂ |
ತಲ್ಲಿಂಗಂ ಮನುತೇ ಯಸ್ತು ಪ್ರಾಣಲಿಂಗಸ್ಯ ಪೂಜನಂ ||
ಜೀವೋ ಶಿವಾಲಯಃ ಪ್ರೋಕ್ತಃ ಲಿಂಗದೇವಃ ಪರಃಶಿವಃ |
ತೈಜೇದ್ಯಜ್ಞಾನನಿರ್ಮಾಲ್ಯಂ ಸೋsಹಂಭಾವೇನ ಪೂಜಯೇತ್ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu iṣṭa-prāṇa-bhāvaliṅgada pūjeya vivaraventendaḍe:
Iṣṭaliṅgadalli aṣṭavidhārcane ṣōḍaśōpacāraṅgaḷaṁ
māḍuvadu iṣṭaliṅgada pūje.
Ā liṅgavanu manas'sinalliyē
dhyānisuvadu prāṇaliṅgada pūje.
Jīvanemba śivālayadoḷu prāṇaliṅgavē dēva nōḍā.
Ajñānavemba nirmālyavaṁ kaḷadu
sōhaṁ bhāvadalli pūjisutirpude
prāṇaliṅgapūje nōḍā.
Idakke īśvarōsvāca:
``Aṣṭavidhārcanaṁ kuryāt iṣṭaliṅgasya pūjanaṁ |
talliṅgaṁ manutē yastu prāṇaliṅgasya pūjanaṁ ||
jīvō śivālayaḥ prōktaḥ liṅgadēvaḥ paraḥśivaḥ |
taijēdyajñānanirmālyaṁ sōshambhāvēna pūjayēt ||''
intendudāgi, apramāṇakūḍalasaṅgamadēvā.