Index   ವಚನ - 346    Search  
 
ಭಾವಲಿಂಗದಲ್ಲಿ ಐಕ್ಯ-ಶರಣಸ್ಥಲವೆಂಬ ಯೋಗಾಂಗವೈಕ್ಯವಾಯಿತ್ತು. ಪ್ರಾಣಲಿಂಗದಲ್ಲಿ ಪ್ರಾಣಲಿಂಗಿ-ಪ್ರಸಾದಿಸ್ಥಲವೆಂಬ ಭೋಗಾಂಗವೈಕ್ಯವಾಯಿತ್ತು. ಇಷ್ಟಲಿಂಗದಲ್ಲಿ ಮಹೇಶ್ವರ-ಭಕ್ತಸ್ಥಲವೆಂಬ ತ್ಯಾಗಾಂಗವೈಕ್ಯವಾಯಿತ್ತು ನೋಡಾ. ಇದಕ್ಕೆ ಈಶ್ವರ ಉವಾಚ: ``ತತ್ಪದೇನೋಚ್ಯತೇ ಲಿಂಗಂ ತ್ವಂಪದೇನಾಂಗವಿೂರಿತಂ | ಅನಯೋರೈಕ್ಯೇ ಬಾಹೋಯಂ ಸಂಬಂಧೋsಸಿಪದೇವಪಿ || ಸವಿತುಃ ಪದಮಂಗಸ್ಯಾತ್ ಭರ್ಗೋಲಿಂಗಮುದಾಹೃತಂ | ಧೀಮಹೀ ಪದಮಿತ್ಯೇಷಾಂ ಗಾಯತ್ರೀಂಹ್ಯಾಂಗಲಿಂಗವತ್ || ತಚ್ಛಬ್ದಂ ಲಿಂಗಮಿತ್ಯಾಹುಃ ಸವಿತುಃ ಅಂಗಮೇವಚ | ತತ್ಸವಿತುರ್ದ್ವಯೋರೈಕ್ಯಂ ಧೀಮಹೀ ಕಮಲೋದ್ಭವಾ ||'' ಇಂತೆಂದುದಾಗಿ, ಇದಕ್ಕೆ ಶ್ರುತಿ: ``ಸವಿತು ಪದಮೇ ಅಂಗಃ ಭರ್ಗೋ ತದಸ್ಯ ವರಣಿಯಾ | ಅನಯೋರೈಕ್ಯಂ ಧೀಮಹಿ ಪದಮಿತ್ಯೇಷಾಂ | ಪ್ರಾಹುರ್ಜೀವಪರಮೈಕ್ಯಂ |'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.