Index   ವಚನ - 350    Search  
 
ಇಷ್ಟಲಿಂಗಕ್ಕೆ ರೂಪಾಗಿ ಬಂದುದ ಕಾಯದ ಕೈಯಲ್ಲಿ ಕೊಡುವುದು. ಪ್ರಾಣಲಿಂಗಕ್ಕೆ ರುಚಿಯಾಗಿ ಬಂದುದ ಮನದ ಕೈಯಲ್ಲಿ ಕೊಡುವುದು. ಭಾವಲಿಂಗಕ್ಕೆ ತೃಪ್ತಿಯಾಗಿ ಬಂದುದ ಭಾವದ ಕೈಯಲ್ಲಿ ಕೊಡುವುದು ನೋಡಾ. ಇದಕ್ಕೆ ಈಶ್ವರೋsವಾಚ: ಇಷ್ಟಲಿಂಗಾರ್ಪಿತಂ ರೂಪಂ ಪ್ರಾಣಲಿಂಗಾರ್ಪಿತಂ ರುಚಿಃ | ಭಾವಲಿಂಗಾರ್ಪಿತಂ ತೃಪ್ತಿಃ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.