Index   ವಚನ - 351    Search  
 
ಇನ್ನು ಗುರುಲಿಂಗ ಶಿವಲಿಂಗ ಜಂಗಮಲಿಂಗದ ವಿವರವೆಂತೆಂದಡೆ: ಗುರುಲಿಂಗವು ಸಕಲನು, ಶಿವಲಿಂಗವು ನಿಃಕಲನು, ಜಂಗಮಲಿಂಗವು ಸಕಲನಿಃಕಲನು ನೋಡಾ. ಇದಕ್ಕೆ ಈಶ್ವರೋsವಾಚ: ಸಕಲಂ ಗುರುಲಿಂಗಂ ಚ ನಿಷ್ಕಲಂ ಶಿವಲಿಂಗಕಂ | ಸಕಲಂ ನಿಃಕಲಂ ಚೈವ ಜಂಗಮಶ್ಚ ಪ್ರಕೀರ್ತಿತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.