ಇನ್ನು ಗುರುಲಿಂಗ ಶಿವಲಿಂಗ
ಜಂಗಮಲಿಂಗದ ವಿವರವೆಂತೆಂದಡೆ:
ಗುರುಲಿಂಗವು ಸಕಲನು, ಶಿವಲಿಂಗವು ನಿಃಕಲನು,
ಜಂಗಮಲಿಂಗವು ಸಕಲನಿಃಕಲನು ನೋಡಾ.
ಇದಕ್ಕೆ ಈಶ್ವರೋsವಾಚ:
ಸಕಲಂ ಗುರುಲಿಂಗಂ ಚ ನಿಷ್ಕಲಂ ಶಿವಲಿಂಗಕಂ |
ಸಕಲಂ ನಿಃಕಲಂ ಚೈವ ಜಂಗಮಶ್ಚ ಪ್ರಕೀರ್ತಿತಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu guruliṅga śivaliṅga
jaṅgamaliṅgada vivaraventendaḍe:
Guruliṅgavu sakalanu, śivaliṅgavu niḥkalanu,
jaṅgamaliṅgavu sakalaniḥkalanu nōḍā.
Idakke īśvarōsvāca:
Sakalaṁ guruliṅgaṁ ca niṣkalaṁ śivaliṅgakaṁ |
sakalaṁ niḥkalaṁ caiva jaṅgamaśca prakīrtitaḥ ||''
intendudāgi, apramāṇakūḍalasaṅgamadēvā.