ಇನ್ನು ಪ್ರಥಮ ಲಿಂಗದಲ್ಲಿ, ದ್ವಿತೀಯ ಲಿಂಗದಲ್ಲಿ,
ತೃತೀಯ ಲಿಂಗದಲ್ಲಿ ಮಾಡುವ ಪೂಜಾವಿಧಿ ಕ್ರಮವೆಂತೆಂದಡೆ:
ಶಕ್ತಿ ಪ್ರಥಮಲಿಂಗ, ಆ ಲಿಂಗವೆ ಗುರುಲಿಂಗ,
ಆ ಸನ್ನಿಧಿಯೇ ಶಿವಲಿಂಗ, ಆ ಲಿಂಗವೆ ಜಂಗಮಲಿಂಗ.
ಇಂತೀ ತ್ರಿವಿಧವು ಗುರುಲಿಂಗದೊಳಗಿಹವು.
ಇದಕ್ಕೆ ಈಶ್ವರೋsವಾಚ:
ಶಕ್ತಿಃ ಸದ್ಗುರುಲಿಂಗಂ ಚ ಸನ್ನಿಧೌ ಶಿವಲಿಂಗಕಂ |
ತಲ್ಲಿಂಗಂ ಜಂಗಮಲಿಂಗಂ ತ್ರಿವಿಧಂ ಗುರುಮಿಶ್ರಿತಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.