Index   ವಚನ - 354    Search  
 
ಶ್ರೀಗುರುವಿನ ಉಪದೇಶ ಮಂತ್ರಮಾರ್ಗದಲ್ಲಿ ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬ ಅಷ್ಟಾಂಗಯೋಗದಲ್ಲಿ ನಿರತನಾಗಿ, ಇಂದ್ರಿಯವ್ಯವಹಾರ ದೇಹವಿಕಾರವಿಲ್ಲದೆ ನಿರಾಕಾರಲಿಂಗಸಂಗಿಯಾಗಿ ಪ್ರಥಮಕಾಲ ದ್ವಿತೀಯಕಾಲ ತೃತೀಯಕಾಲವೆಂಬ ಕಾಲತ್ರಯಂಗಳನುಲ್ಲಂಘಿಸದೆ ಮಾಡುವುದೀಗ ಲಿಂಗಪೂಜೆ ನೋಡಾ, ಅಪ್ರಮಾಣಕೂಡಲಸಂಗಮದೇವ.