Index   ವಚನ - 355    Search  
 
ಇನ್ನು ಗುರುಪೂಜಾವಿಧಿಯ ಕ್ರಮ ತಾನೇ ಅಷ್ಟಾಂಗಯೋಗ. ಅದೆಂತೆಂದಡೆ: ಹಿಂಸೆಯನತಿಗಳೆದು, ಅನ್ಯದೈವವ ಬಿಡುವ, ಅನ್ಯಕರ್ಮವನಾಚರಿಸದಿಹ, ಪರಧನ ಪರಸ್ತ್ರೀ ವರ್ಜಿತ, ಇವು ಐದು ಯಮಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.