ಶ್ರೀಗುರುವಿನ ಉಪದೇಶ ಮಂತ್ರಮಾರ್ಗದಲ್ಲಿ
ಯಮ ನಿಯಮಾಸನ ಪ್ರಾಣಾಯಾಮ
ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ
ಎಂಬ ಅಷ್ಟಾಂಗಯೋಗದಲ್ಲಿ ನಿರತನಾಗಿ,
ಇಂದ್ರಿಯವ್ಯವಹಾರ ದೇಹವಿಕಾರವಿಲ್ಲದೆ
ನಿರಾಕಾರಲಿಂಗಸಂಗಿಯಾಗಿ
ಪ್ರಥಮಕಾಲ ದ್ವಿತೀಯಕಾಲ ತೃತೀಯಕಾಲವೆಂಬ
ಕಾಲತ್ರಯಂಗಳನುಲ್ಲಂಘಿಸದೆ ಮಾಡುವುದೀಗ
ಲಿಂಗಪೂಜೆ ನೋಡಾ,
ಅಪ್ರಮಾಣಕೂಡಲಸಂಗಮದೇವ.
Art
Manuscript
Music
Courtesy:
Transliteration
Śrīguruvina upadēśa mantramārgadalli
yama niyamāsana prāṇāyāma
pratyāhāra dhyāna dhāraṇa samādhi
emba aṣṭāṅgayōgadalli niratanāgi,
indriyavyavahāra dēhavikāravillade
nirākāraliṅgasaṅgiyāgi
prathamakāla dvitīyakāla tr̥tīyakālavemba
kālatrayaṅgaḷanullaṅghisade māḍuvudīga
liṅgapūje nōḍā,
apramāṇakūḍalasaṅgamadēva.