ಇನ್ನು ಪ್ರಥಮಲಿಂಗ ದ್ವಿತೀಯಲಿಂಗ ತೃತೀಯಲಿಂಗದಲ್ಲಿ
ಸಮುದ್ಭವವಾದ,
ಪ್ರಥಮ ದ್ವಿತೀಯ ತೃತೀಯ ಪ್ರಸಾದದ ವಿವರ ಅದೆಂತೆಂದಡೆ:
ಪ್ರಥಮಲಿಂಗದಲ್ಲಿ ಶುದ್ಧ, ದ್ವಿತೀಯಲಿಂಗದಲ್ಲಿ ಸಿದ್ಧ,
ತೃತೀಯಲಿಂಗದಲ್ಲಿ ಪ್ರಸಿದ್ಧ.
ಶುದ್ಧ ಗುರುಪ್ರಸಾದ, ಸಿದ್ಧ ಲಿಂಗಪ್ರಸಾದ,
ಪ್ರಸಿದ್ಧ ಜಂಗಮಪ್ರಸಾದ,
ಶಿವಜ್ಞಾನವೇ ಮಹಾಪ್ರಸಾದ-ಇಂತು ಚತುರ್ವಿಧ ಪ್ರಸಾದ ನೋಡಾ
ಅಪ್ರಮಾಣಕೂಡಲಸಂಗಮದೇವಾ.