ಪರಾಪರವಿಲ್ಲದಂದು ಆ ಪರಾಪರಕ್ಕಪರವಾಗಿಹ
ಪರಬ್ರಹ್ಮವಿಲ್ಲದಂದು, ಪರಶಿವವಿಲ್ಲದಂದು,
ಶೂನ್ಯ ನಿಃಶೂನ್ಯ ಮಹಾಶೂನ್ಯ ಅತಿಮಹಾಶೂನ್ಯ
ಎಂಬ ಮಹಾಘನವಸ್ತುವಿಲ್ಲದಂದು,
ಊರ್ಧ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯವಾಗಿಹ
ನಿರಾಮಯಬ್ರಹ್ಮವಿಲ್ಲದಂದು,
ಶಂಕರ ಶಶಿಧರ ಗಂಗಾಧರ
ಗೌರೀಶ ವೃಷಭವಾಹನರಿಲ್ಲದಂದು,
ಉಮಾಪತಿಯಿಲ್ಲದಂದು,
ಸುರಾಳ-ನಿರಾಳ, ಹಮ್ಮು-ಬಿಮ್ಮು ಮದಹಂಕಾರವಿಲ್ಲದಂದು,
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು,
ಪೃಥ್ವಿ ಅಪ್ಪು ತೇಜ ವಾಯು ಆಕಾಶವಿಲ್ಲದಂದು,
ಚಂದ್ರಸೂರ್ಯಾತ್ಮರಿಲ್ಲದಂದು, ಇವೇನೂ ಎನಲಿಲ್ಲದಂದು,
ನಿರಂಜನಾತೀತನಾಗಿರ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Parāparavilladandu ā parāparakkaparavāgiha
parabrahmavilladandu, paraśivavilladandu,
śūn'ya niḥśūn'ya mahāśūn'ya atimahāśūn'ya
emba mahāghanavastuvilladandu,
ūrdhvaśūn'ya, adhaḥśūn'ya, madhyaśūn'yavāgiha
nirāmayabrahmavilladandu,
śaṅkara śaśidhara gaṅgādhara
gaurīśa vr̥ṣabhavāhanarilladandu,
Umāpatiyilladandu,
surāḷa-nirāḷa, ham'mu-bim'mu madahaṅkāravilladandu,
brahma viṣṇu rudra īśvara sadāśivarilladandu,
pr̥thvi appu tēja vāyu ākāśavilladandu,
candrasūryātmarilladandu, ivēnū enalilladandu,
niran̄janātītanāgirdanayya illadante,
nam'ma apramāṇakūḍalasaṅgamadēvanu.