ಆದಿಮೂಲ ಅನಾದಿಮೂಲಂಗಳಿಗತ್ತತ್ತವಾಗಿಹ
ಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿ
ಅನಂತಕೋಟಿಬ್ರಹ್ಮಾಂಡಂಗಳ ಅನಂತಕೋಟಿಮಹಾಭುವನಂಗಳ
ಅನಂತಕೋಟಿಲೋಕಾದಿಲೋಕಂಗಳ ಸೃಜಿಸಬೇಕೆಂಬ
ನೆನಹುಮಾತ್ರದಲ್ಲಿ ಈ ನಿರಂಜನಾತೀತ ಪ್ರಣವದುತ್ಪತ್ಯವಾಯಿತ್ತು.
ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ
ನಿರಂಜನ ಕಲಾಪ್ರಣವವು ಉತ್ಪತ್ಯವಾಯಿತ್ತು.
ಆ ನಿರಂಜನಾತೀತ ಕಲಾಪ್ರಣವದ ನೆನಹುಮಾತ್ರದಲ್ಲಿಯೇ
ಅನಾದಿಪ್ರಣವದುತ್ಪತ್ಯವಾಯಿತ್ತು.
ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ
ಅನಾದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು.
ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ
ಅದಿಪ್ರಣವ ಉತ್ಪತ್ಯವಾಯಿತ್ತು.
ಆ ಆದಿಪ್ರಣವದ ನೆನಹು ಮಾತ್ರದಲ್ಲಿಯೇ.
ಆದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ:
ಅಖಂಡಮೂಲ ಚಿಂತಾಯಾಂ ನಿರಂಜನಾತೀತೋದ್ಭವಃ |
ನಿರಂಜನಾತೀತ ಚಿಂತಾಯಾಂ ನಿರಂಜನೋಂಕಾರಸಂಭವಃ ||
ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ |
ಅವಾಚ್ಯಸ್ಯ ಚ ಚಿಂತಾಯಾಂ ಕಲಾನಾಮ ಸಮುದ್ಗತಃ ||
ಕಲಾಪ್ರಣವಚಿಂತಾಯಾಂ ಅನಾದಿಪ್ರಣವೋsಭವತ್ |
ಅನಾದಿಪ್ರಣವ ಚಿಂತಾಯಾಂ ಅನಾದಿಮಂತ್ರ ಸಂಭವಃ ||
ಅನಾದಿಮಂತ್ರಚಿಂತಾಯಾಂ ಆದಿಪ್ರಣವ ಸಂಭವಃ |
ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||''
ಇಂತೆಂದುದಾಗಿ.
ಇದಕ್ಕೆ ಮಹಾವೇದದ ಪ್ರಣವ ಪುರುಷಸೂಕ್ತೇ:
ಓಂ ಅಖಂಡಮೂಲಚಿಂತಾಯಾಂ ನಿರಂಜನಾತೀತಮಜಾಯತ |
ಕಲಾಪ್ರಣವ ತದಸ್ಯಾ ಅನಾದಿ ಓಂಕಾರೋsಜಾಯತ ||
ಅನಾದ್ಯೋಂಕಾರಚಿಂತಾಯಾಮನಾದಿ ತ್ರಿಯಕ್ಷರಮಜಾಯತ |
ಅನಾದಿ ತ್ರಿಯಕ್ಷರ ಚಿಂತಾಯಾಂ ಆದಿಪ್ರಣವೋsಜಾಯತ |
ನಿರಂಜನಾತೀತ ಪ್ರಣವಾಭ್ಯಾಂ ನಿರಂಜನಪ್ರಣವೋsಜಾಯತ |
ನಿರಂಜನಪ್ರಣವಾದಸ್ಯ ಅವಾಚ್ಯೋಂಕಾವೋsಜಾಯತ |
ಅವಾಚ್ಯೋಂಕಾರಚಿಂತಾಭ್ಯಾಂ ಕಲಾಪ್ರಣವೋsಜಾಯತ |
ಆದಿಪ್ರಣವಚಿಂತಾಯಾಂ ಅಕ್ಷರತ್ರಯಮಜಾಯತ ||''
ಇಂತೆಂದುದು ಶ್ರುತಿ.
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ādimūla anādimūlaṅgaḷigattattavāgiha
mahāmūlasvāmigattattavāgiha akhaṇḍamahāmūlasvāmi
anantakōṭibrahmāṇḍaṅgaḷa anantakōṭimahābhuvanaṅgaḷa
anantakōṭilōkādilōkaṅgaḷa sr̥jisabēkemba
nenahumātradalli ī niran̄janātīta praṇavadutpatyavāyittu.
Ā avācyapraṇavada nenahumātradalliyē
niran̄jana kalāpraṇavavu utpatyavāyittu.
Ā niran̄janātīta kalāpraṇavada nenahumātradalliyē
anādipraṇavadutpatyavāyittu.
Ā anādipraṇavada nenahumātradalliyē
anādi akāra ukāra makāra utpatyavāyittu.
Ā anādi akāra ukāra makārada nenahumātradalliyē
adipraṇava utpatyavāyittu.
Ā ādipraṇavada nenahu mātradalliyē.
Ādi akāra ukāra makāra utpatyavāyittu nōḍā.
Idakke cakrātītāgamē:
Akhaṇḍamūla cintāyāṁ niran̄janātītōdbhavaḥ |
niran̄janātīta cintāyāṁ niran̄janōṅkārasambhavaḥ ||
Niran̄janasya cintāyāṁ avācyaṁ nāma jāyatē |
avācyasya ca cintāyāṁ kalānāma samudgataḥ ||
kalāpraṇavacintāyāṁ anādipraṇavōsbhavat |
anādipraṇava cintāyāṁ anādimantra sambhavaḥ ||
anādimantracintāyāṁ ādipraṇava sambhavaḥ |
ādipraṇavacintāyāṁ akṣaratrayamudgataṁ ||''
intendudāgi.
Idakke mahāvēdada praṇava puruṣasūktē:
Ōṁ akhaṇḍamūlacintāyāṁ niran̄janātītamajāyata |
Kalāpraṇava tadasyā anādi ōṅkārōsjāyata ||
anādyōṅkāracintāyāmanādi triyakṣaramajāyata |
anādi triyakṣara cintāyāṁ ādipraṇavōsjāyata |
niran̄janātīta praṇavābhyāṁ niran̄janapraṇavōsjāyata |
niran̄janapraṇavādasya avācyōṅkāvōsjāyata |
avācyōṅkāracintābhyāṁ kalāpraṇavōsjāyata |
ādipraṇavacintāyāṁ akṣaratrayamajāyata ||''
intendudu śruti.
Apramāṇakūḍalasaṅgamadēvā.