Index   ವಚನ - 386    Search  
 
ಆ ಕಲಾಪ್ರಣವದ ಮೂವತ್ತೆಂಟು ಕಲೆಗಳ ಕಾಂತಿ ಅದೆಂತೆಂದಡೆ: ಒಂದೊಂದು ಕಲೆಗಳು ಹೊಳವುತ್ತಿಹ ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು. ಒಂದೊಂದು ಕಲೆಗಳು ಕೋಟಿಮಿಂಚುಗಳಿಗೆ ಸಮಾನವಹ ಪ್ರಭೆಯನುಳ್ಳ ಜ್ಞಾನಸ್ವರೂಪವಹ ಸೂಕ್ಷ್ಮ ಸೂಕ್ಷ್ಮಕಲೆಗಳೇಕವಾಗಿ ಮೂವತ್ತೆಂಟುಕೋಟಿಮಿಂಚುಗಳಿಗೆ ಸಮಾನವಹ ಪ್ರಭೆಯನುಳ್ಳ ಚಿತ್ಕಳಾಪ್ರಣವ ಶಿಖಾಗ್ರದಲ್ಲಿಹುದು. ಇದಕ್ಕೆ ಈಶ್ವರೋsವಾಚ: ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿಸಮಪ್ರಭಾ | ತಸ್ಯೋರ್ಧ್ವಂ ಚ ಶಿಖಾಸೂಕ್ಷ್ಮಾಂ ಚಿದ್ರೂಪಾ ಪರಮಾ ಕಲಾ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.