ಚಿತ್ಕಲಾಪ್ರಣವ ಉಪಮಿಸಬಾರದ ಉಪಮಾತೀತವು
ಮನಾತೀತವು ವರ್ಣಾತೀತವು ತತ್ವಾತೀತವು ಜ್ಞಾನಾತೀತವು.
ನಿರಂಜನಕಲಾಪ್ರಣವವು ಅತ್ಯಂತ ಸೂಕ್ಷ್ಮವಾಗಿಹುದು.
ಇದಕ್ಕೆ ಈಶ್ವರೋsವಾಚ:
ವಾಚಾತೀತಂ ಮನೋsತೀತಂ ವರ್ಣಾತೀತಂ ಚ ತತ್ಪದಂ |
ಜ್ಞಾನಾತೀತನಿರಂಜನ್ಯಂ ಕಲಾಯಾಂ ಸೂಕ್ಷ್ಮ ಭಾವಯೇತ್'' ||
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Citkalāpraṇava upamisabārada upamātītavu
manātītavu varṇātītavu tatvātītavu jñānātītavu.
Niran̄janakalāpraṇavavu atyanta sūkṣmavāgihudu.
Idakke īśvarōsvāca:
Vācātītaṁ manōstītaṁ varṇātītaṁ ca tatpadaṁ |
jñānātītaniran̄jan'yaṁ kalāyāṁ sūkṣma bhāvayēt'' ||
intendudāgi, apramāṇakūḍalasaṅgamadēvā.