Index   ವಚನ - 387    Search  
 
ಚಿತ್ಕಲಾಪ್ರಣವ ಉಪಮಿಸಬಾರದ ಉಪಮಾತೀತವು ಮನಾತೀತವು ವರ್ಣಾತೀತವು ತತ್ವಾತೀತವು ಜ್ಞಾನಾತೀತವು. ನಿರಂಜನಕಲಾಪ್ರಣವವು ಅತ್ಯಂತ ಸೂಕ್ಷ್ಮವಾಗಿಹುದು. ಇದಕ್ಕೆ ಈಶ್ವರೋsವಾಚ: ವಾಚಾತೀತಂ ಮನೋsತೀತಂ ವರ್ಣಾತೀತಂ ಚ ತತ್ಪದಂ | ಜ್ಞಾನಾತೀತನಿರಂಜನ್ಯಂ ಕಲಾಯಾಂ ಸೂಕ್ಷ್ಮ ಭಾವಯೇತ್'' || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.