Index   ವಚನ - 389    Search  
 
ಅವಾಚ್ಯಪ್ರಣವ ಅನಿರ್ವಾಚ್ಯಪ್ರಣವವಿಲ್ಲದಂದು, ಆಕಾರ ನಿರಾಕಾರವಿಲ್ಲದಂದು, ನಾನು ನೀನು ಎನಲಿಲ್ಲದಂದು, ಕಲಾಪ್ರಣವವಾಗಿದ್ದನಯ್ಯ ನಮ್ಮ ಅಪ್ರಮಾಣಕೂಡಲಸಂಗಮದೇವ.