Index   ವಚನ - 403    Search  
 
ಇನ್ನು ಲಿಂಗಗರ್ಭದಲ್ಲಿ ಅನೇಕಕೋಟಿ ತತ್ತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು ಅಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕಕೋಟಿ ಮಹೇಶ್ವರರು, ಅನೇಕ ಕೋಟಿ ರುದ್ರರು, ಅನೇಕ ಕೋಟಿ ವಿಷ್ಣ್ವಾದಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು, ಅನೇಕಕೋಟಿ ಚಂದ್ರಾದಿತ್ಯರು, ಅನೇಕಕೋಟಿ ಋಷಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಬ್ರಹ್ಮಾಂಡಂಗಳಡಗಿ ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಪರಿಪೂರ್ಣ ಗೋಳಕಾಕಾರ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅತ್ಯಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ಇದಕ್ಕೆ ಶಿವಧರ್ಮಸೂತ್ರೇ: ತತ್ವಸಂಜ್ಞಾಃ ಅಸಂಖ್ಯಾತಾಃ ಅಸಂಖ್ಯಾತ ಅಂಬರಂ ತಥಾ | ಅಸಂಖ್ಯಾ ದೇವಮುನಯಃ ಲಿಂಗತತ್ವೇ ವಿಲೀಯಂತೇ || ಅಸಂಖ್ಯಾತ ಸೂರ್ಯಚಂದ್ರಾಗ್ನಿ ತಾರಾಖ್ಯ ದೈತ್ಯಮಾನವಾಃ | ಅಸಂಖ್ಯಾತ ಸುರೇಂದ್ರಾಣಾಂ ಲಿಂಗಗೆರ್ಭೇ ವಿಲೀಯತೇ || ಅಸಂಖ್ಯಾತ ಮಹಾವಿಷ್ಣುಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಮಹದಾಕಾಶಂ ಲಿಂಗಗರ್ಭೇ ವಿಲೀಯತೇ ||'' ಇಂತೆಂದುದಾಗಿ, ಇದಕ್ಕೆ ಶಿವಧರ್ಮಪುರಾಣೇ: ಕಲ್ಪಾಂತೇ ತಸ್ಯ ದೇವಸ್ಯ ವಿಲೀಯಂತೇ ಸರ್ವದೇವತಾ | ದಕ್ಷಿಣೇ ಲೀಯತೇ ಬ್ರಹ್ಮಾ ವಾಮಭಾಗೇ ಜನಾರ್ಧನಃ || ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಃ | ಲೀಯಂತೇ ಮೂರ್ಧ್ನಿ ವೈ ವೇದಾ ಷಡಂಗಪದಕ್ರಮಾತ್ || ಜಟರೇ ಲೀಯತೇ ಸರ್ವಂ ಜಗತ್ಸ್ಥಾವರಜಂಗಮಂ | ಉತ್ಪಾದ್ಯತೇ ಘನಸ್ತ ಸ್ಮಾತ್ ಬ್ರಹ್ಮಾದ್ಯಂ ಸಚರಾಚರಂ ||'' ಇಂತೆಂದುದಾಗಿ, ಇದಕ್ಕೆ ಶಿವಲಿಂಗಾಗಮೇ: ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿತಸ್ಯ ಪೀಠಿಕಾ | ಆಲಯಃ ಸರ್ವದೇವಾನಾಂ ಲಯನಾಂ ಲಿಂಗಮುಚ್ಯತೇ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಉತ್ಪಾದ್ಯಂತೇ ಪುನಸ್ತಸ್ಮಾತ್ ಬ್ರಹ್ಮವಿಷ್ಣ್ವಾದಿ ದೇವತಾಃ ||'' ಇಂತೆಂದುದಾಗಿ, ಇದಕ್ಕೆ ಮಕುಟಾಗಮ ಸಾರೇ : “ಆದಿ ಮಧ್ಯಾಂತ ಶೂನ್ಯಂ ಚ ಶೂನ್ಯ ಶೂನ್ಯಂ ದಶಾದಿಶಂ | ಸರ್ವಶೂನ್ಯಂ ನಿರಾಕಾರಂ ನಿರ್ದ್ವಂದ್ವಂ ಪರಮಂ ಪದಂ | |” ಇಂತೆಂದುದಾಗಿ, ಇದಕ್ಕೆ ಉತ್ತರವಾತುಲಾಗಮೇ: ನ ಭೂಮಿಃ ಜಲಂ ಚೈವ ನ ತೇಜೋ ನ ಚ ವಾಯುಚ | ನಚಾಕಾಶಂ ನ ಸೂರ್ಯಶ್ಚ ನಚ ಚಂದ್ರಮ ಇಂದ್ರಯೋ | ನ ಚ ಬ್ರಹ್ಮ ನ ವಿಶ್ವಂ ಚ ನಚೋ ನಕ್ಷತ್ರಕಾರಕಾ | ಏಕಮೇವ ಪರಂ ನಾಸ್ತಿ ಅಖಂಡಿತಮಹೋದಯಂ | ಸರ್ವಶೂನ್ಯಂ ನಿರಾಲಂಬಂ ಸ್ವಯಂ ಲಿಂಗಮಯಂ ಪರಂ ||'' ಇಂತೆಂದುದಾಗಿ, ಇದಕ್ಕೆ ರುದ್ರಕೂಟಿಸಂಹಿತಾಯಾಂ: “ವಾಚಾತೀತಂ ಮನೋತೀತಂ ಭಾವತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾಗಮಸಾರೇ: ಊರ್ಧ್ವಶೂನ್ಯಂ ಅಧಃಶೂನ್ಯಂ ಮಧ್ಯಶೂನ್ಯಂ ನಿರಾಮಯಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ | |” ಇಂತೆಂದುದಾಗಿ, ಇದಕ್ಕೆ ಆದಿನಾರಾಯಣ ಉವಾಚ : “ನಮಸ್ತೇ ಜ್ಞಾನಲಿಂಗಾಯ ಶಿವಲಿಂಗಾಯ ಲಿಂಗಿನೇ | ನಮಸ್ತೇ ಗೂಢಲಿಂಗಾಯ ಪರಲಿಂಗಾಯ ಲಿಂಗಿನೇ || ಜಗತ್ಕಾರಣಲಿಂಗಾಯ ಜಗತಾಂ ಪತಯೇ ನಮಃ | ಆವಯೋಃ ಪತಯೇ ನಮಃ ನಿತ್ಯಂ ಪತೀನಾಂ ಪತಯೇ || ಅನಾದಿಮೂಲಸಂಸಾರೇ ರೋಗವೈದ್ಯಾಯ ಶಂಭವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಪ್ರಳಯಾಂಬುಧಿಸಂಸ್ಥಾಯ ಪ್ರಳಯೋತ್ಪತ್ತಿಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಆದಿಮಧ್ಯಾಂತಶೂನ್ಯಾಯ ಅಂಬರಸ್ಯಾಪಿ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿಷ್ಕಳಾಯ ವಿಶುದ್ಧಾಯ ನಿತ್ಯಾನಂದಸ್ಯ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿರ್ವಿಕಾರಾಯ ನಿತ್ಯಾಯ ಸತ್ಯಾಯ ಪರಮಾತ್ಮನೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಓಂಕಾರ ಶಾಂತಾಯ ಸೂಕ್ಷ್ಮಾಯ ಸ್ತ್ರೀಪುಂಸಾಯಾತ್ಮರೂಪಿಣೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ | ಲೀಲಾತ್ತಂಚ ದ್ವಯೋರ್ಮಧ್ಯೇ ಕಾಯಾತ್ಮರೂಪಣೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾದೇವ ಉವಾಚ: ವಾಚಾತೀತಂ ಮನೋತೀತಂ ವರ್ಣಾತೀತಂ ಪರಂ ಶಿವಂ | ಸರ್ವಶೂನ್ಯ ನಿರಾಕಾರಂ ನಿರಾಲಂಬಸ್ಯ ಲಿಂಗಯೋಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.