Index   ವಚನ - 404    Search  
 
ಇನ್ನು ಆ ಅಖಂಡ ಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹ ಮಹಾಘನಲಿಂಗದಲ್ಲಿ ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋ ಹಸ್ತ,ವಿಶ್ವತೋಪಾದ, ವಿಶ್ವತೋಬಾಹುವನುಳ್ಳ ಅನಾದಿಸದಾಶಿವತತ್ವ ಉತ್ಪತ್ಯವಾಯಿತ್ತು. ಆ ಸದಾಶಿವನ ಈಶಾನ ಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಅನಾದಿ ಶಿವತತ್ವದಿಂದ ಅನೇಕಮುಖ, ಅನೇಕಚಕ್ಷು, ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಈಶ್ವರತತ್ತ್ವದಲ್ಲಿಸಹಸ್ರ ಶಿರ, ಸಹಸ್ರ ಅಕ್ಷ , ಸಹಸ್ರ ಬಾಹು , ಸಹಸ್ರ ಪಾದವನುಳ್ಳ ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಮಹೇಶ್ವರತತ್ತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ ಆದಿಸದಾಶಿವ ಉತ್ಪತ್ಯವಾಯಿತ್ತು. ಆ ಆದಿಸದಾಶಿವತತ್ತ್ವದಲ್ಲಿ ಷಷ್ಠ ವಕ್ತ್ರ ದ್ವಾದಶಭುಜ ತ್ರಿಪಾದವನುಳ್ಳ ಆದಿ ಈಶ್ವರತತ್ತ್ವ ಉತ್ಪತ್ಯವಾಯಿತ್ತು. ಆ ಆದಿ ಈಶ್ವರತತ್ತ್ವದಲ್ಲಿ ಪಂಚವಿಂಶತಿಮುಖ, ಪಂಚದಶಭುಜವನುಳ್ಳ ಸದಾಶಿವತತ್ತ್ವ ಉತ್ಪತ್ಯವಾಯಿತ್ತು. ಇದಕ್ಕೆ ಅತಿ ಮಹಾಗಮೇ: ``ಅಖಂಡಲಿಂಗಸಂಭೂತಾ ಅನಾದಿ ಸಾದಾಖ್ಯಸ್ತಥಾ | ಅನಾದಿ ವಿಶ್ವತೋಮುಖ ತತ್ತ್ವೇ ಚ ಅನಾದಿ ಈಶ್ವರೋದ್ಭವಾಃ || ಅನಾದಿ ಈಶ್ವರ ತತ್ತ್ವೇ ಚ ಅನಾದಿ ಮಾಹೇಶ್ವರೋ ಭವೇತ್ | ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ || ಆದಿಸಾದಾಖ್ಯ ತತ್ತ್ವೇ ಚ ಆದಿ ಈಶ್ವರೋದ್ಭವಂ | ಆದಿ ಈಶ್ವರತತ್ತ್ವೇ ಚ ಆದಿ ಮಹೇಶ್ವರೋ ಭವೇತ್ || ಆದಿ ಮಹೇಶ್ವರ ಶಂಭುತೊ ಶಿವಸದಾಶಿವಾಯುವೋ | ಇತಿ ತತ್ತ್ವೋದ್ಭವಂಜ್ಞಾನಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.