ಇನ್ನು ಆ ಅಖಂಡ ಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ
ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ
ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹ
ಮಹಾಘನಲಿಂಗದಲ್ಲಿ ವಿಶ್ವತೋಮುಖ, ವಿಶ್ವತೋಚಕ್ಷು,
ವಿಶ್ವತೋ ಹಸ್ತ,ವಿಶ್ವತೋಪಾದ, ವಿಶ್ವತೋಬಾಹುವನುಳ್ಳ
ಅನಾದಿಸದಾಶಿವತತ್ವ ಉತ್ಪತ್ಯವಾಯಿತ್ತು.
ಆ ಸದಾಶಿವನ ಈಶಾನ ಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಅನಾದಿ ಶಿವತತ್ವದಿಂದ ಅನೇಕಮುಖ, ಅನೇಕಚಕ್ಷು,
ಅನೇಕ ಬಾಹು, ಅನೇಕ ಪಾದವನುಳ್ಳ
ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು.
ಆ ಅನಾದಿ ಈಶ್ವರತತ್ತ್ವದಲ್ಲಿಸಹಸ್ರ ಶಿರ, ಸಹಸ್ರ ಅಕ್ಷ ,
ಸಹಸ್ರ ಬಾಹು , ಸಹಸ್ರ ಪಾದವನುಳ್ಳ
ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು.
ಆ ಅನಾದಿ ಮಹೇಶ್ವರತತ್ತ್ವದಲ್ಲಿ
ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ
ಆದಿಸದಾಶಿವ ಉತ್ಪತ್ಯವಾಯಿತ್ತು.
ಆ ಆದಿಸದಾಶಿವತತ್ತ್ವದಲ್ಲಿ
ಷಷ್ಠ ವಕ್ತ್ರ ದ್ವಾದಶಭುಜ ತ್ರಿಪಾದವನುಳ್ಳ
ಆದಿ ಈಶ್ವರತತ್ತ್ವ ಉತ್ಪತ್ಯವಾಯಿತ್ತು.
ಆ ಆದಿ ಈಶ್ವರತತ್ತ್ವದಲ್ಲಿ ಪಂಚವಿಂಶತಿಮುಖ,
ಪಂಚದಶಭುಜವನುಳ್ಳ ಸದಾಶಿವತತ್ತ್ವ ಉತ್ಪತ್ಯವಾಯಿತ್ತು.
ಇದಕ್ಕೆ ಅತಿ ಮಹಾಗಮೇ:
``ಅಖಂಡಲಿಂಗಸಂಭೂತಾ ಅನಾದಿ ಸಾದಾಖ್ಯಸ್ತಥಾ |
ಅನಾದಿ ವಿಶ್ವತೋಮುಖ ತತ್ತ್ವೇ ಚ ಅನಾದಿ ಈಶ್ವರೋದ್ಭವಾಃ ||
ಅನಾದಿ ಈಶ್ವರ ತತ್ತ್ವೇ ಚ ಅನಾದಿ ಮಾಹೇಶ್ವರೋ ಭವೇತ್ |
ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ ||
ಆದಿಸಾದಾಖ್ಯ ತತ್ತ್ವೇ ಚ ಆದಿ ಈಶ್ವರೋದ್ಭವಂ |
ಆದಿ ಈಶ್ವರತತ್ತ್ವೇ ಚ ಆದಿ ಮಹೇಶ್ವರೋ ಭವೇತ್ ||
ಆದಿ ಮಹೇಶ್ವರ ಶಂಭುತೊ ಶಿವಸದಾಶಿವಾಯುವೋ |
ಇತಿ ತತ್ತ್ವೋದ್ಭವಂಜ್ಞಾನಂ ದುರ್ಲಭಂ ಕಮಲಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ā akhaṇḍa paripūrṇa apramāṇa agōcara apramēya
avyakta anantatēja anantapracaya anantakōṭi
sūryacandrāgni prakāśavāgiha
mahāghanaliṅgadalli viśvatōmukha, viśvatōcakṣu,
viśvatō hasta,viśvatōpāda, viśvatōbāhuvanuḷḷa
anādisadāśivatatva utpatyavāyittu.
Ā sadāśivana īśāna mukhadalli ākāśa utpatyavāyittu.
Ā anādi śivatatvadinda anēkamukha, anēkacakṣu,
anēka bāhu, anēka pādavanuḷḷa
anādi īśvaratatva utpatyavāyittu.
Ā anādi īśvaratattvadallisahasra śira, sahasra akṣa,
sahasra bāhu, sahasra pādavanuḷḷa
anādi mahēśvaratatva utpatyavāyittu.
Ā anādi mahēśvaratattvadalli
tripan̄camukha, tridaśabhuja, tridaśapādavanuḷḷa
ādisadāśiva utpatyavāyittu.
Ā ādisadāśivatattvadalli
ṣaṣṭha vaktra dvādaśabhuja tripādavanuḷḷa
ādi īśvaratattva utpatyavāyittu.
Ā ādi īśvaratattvadalli pan̄cavinśatimukha,
pan̄cadaśabhujavanuḷḷa sadāśivatattva utpatyavāyittu.
Idakke ati mahāgamē:
``Akhaṇḍaliṅgasambhūtā anādi sādākhyastathā |
anādi viśvatōmukha tattvē ca anādi īśvarōdbhavāḥ ||
anādi īśvara tattvē ca anādi māhēśvarō bhavēt |
anādi māhēśvara śambhuto ādi sadākhya stathā ||
Ādisādākhya tattvē ca ādi īśvarōdbhavaṁ |
ādi īśvaratattvē ca ādi mahēśvarō bhavēt ||
ādi mahēśvara śambhuto śivasadāśivāyuvō |
iti tattvōdbhavan̄jñānaṁ durlabhaṁ kamalānanē ||''
intendudāgi,
apramāṇakūḍalasaṅgamadēvā.