Index   ವಚನ - 406    Search  
 
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ನೆನಹುಮಾತ್ರದಲ್ಲಿಯೇ ಅಣುಚಕ್ರ ಉತ್ಪತ್ಯವಾಯಿತ್ತು. ಆ ಅಣುಚಕ್ರದ ನೆನಹುಮಾತ್ರದಲ್ಲಿಯೇ ಪಶ್ಚಿಮಚಕ್ರ ಉತ್ಪತ್ಯವಾಯಿತ್ತು. ಆ ಪಶ್ಚಿಮಚಕ್ರದ ನೆನಹುಮಾತ್ರದಲ್ಲಿಯೇ ಶಿಖಾಚಕ್ರ ಉತ್ಪತ್ಯವಾಯಿತ್ತು. ಆ ಶಿಖಾಚಕ್ರದ ನೆನಹುಮಾತ್ರದಲ್ಲಿಯೇ ಬ್ರಹ್ಮಚಕ್ರ ಉತ್ಪತ್ಯವಾಯಿತ್ತು. ಆ ಬ್ರಹ್ಮಚಕ್ರದ ನೆನಹುಮಾತ್ರದಲ್ಲಿಯೇ ಆಜ್ಞಾಚಕ್ರ ಉತ್ಪತ್ಯವಾಯಿತ್ತು. ಆ ಆಜ್ಞಾಚಕ್ರದ ನೆನಹುಮಾತ್ರದಲ್ಲಿಯೇ ವಿಶುದ್ಧಿಚಕ್ರ ಉತ್ಪತ್ಯವಾಯಿತ್ತು. ಆ ವಿಶುದ್ಧಿಚಕ್ರದ ನೆನಹುಮಾತ್ರದಲ್ಲಿಯೇ ಅನಾಹತಚಕ್ರ ಉತ್ಪತ್ಯವಾಯಿತ್ತು. ಆ ಅನಾಹತಚಕ್ರದ ನೆನಹುಮಾತ್ರದಲ್ಲಿಯೇ ಮಣಿಪೂರಕಚಕ್ರ ಉತ್ಪತ್ಯವಾಯಿತ್ತು. ಆ ಮಣಿಪೂರಕಚಕ್ರದ ನೆನಹುಮಾತ್ರದಲ್ಲಿಯೇ ಸ್ವಾಧಿಷ್ಠಾನಚಕ್ರ ಉತ್ಪತ್ಯವಾಯಿತ್ತು. ಆ ಸ್ವಾಧಿಷ್ಠಾನಚಕ್ರದ ನೆನಹುಮಾತ್ರದಲ್ಲಿಯೇ ಆಧಾರಚಕ್ರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಈಶ್ವರೋsವಾಚ: ಓಂಕಾರಹೃದಯಜ್ಞಾನಾತ್ ಅಣುಚಕ್ರಂ ಚ ಜಾಯತೇ | ಅಣುಚಕ್ರಮನೋ ಜ್ಞಾನಾತ್ ಪಶ್ಚಿಮಸ್ಯ ಸಮುದ್ಭವಃ || ಪಶ್ಚಿಮಚಕ್ರಚಿಂತಾಯಾಂ ಶಿಖಾಚಕ್ರಂ ಚ ಜಾಯತೇ | ಶಿಖಾನಾಮಸ್ಯ ಚಿಂತಾಯಾಂ ಬ್ರಹ್ಮಚಕ್ರಸಮುದ್ಭವಃ || ಬ್ರಹ್ಮಚಕ್ರಸ್ಯ ಚಿಂತಾಯಾಂ ಆಜ್ಞಾ ನಾಮ ಸಮುದ್ಭವಃ | ಆಜ್ಞಾನಾಮಸ್ಯ ಚಿಂತಾಯಾಂ ವಿಶುದ್ಧೋ ನಾಮ ಜಾಯತೇ || ವಿಶುದ್ಧಚಕ್ರ ಚಿಂತಾಯಾಂ ಅನಾಹತಚಕ್ರೋ ಭವೇತ್ | ಅನಾಹತಸ್ಯ ಚಿಂತಾಯಾಂ ಮಣಿಪೂರಂ ಚ ಜಾಯತೇ || ಮಣಿಪೂರ ಮನೋ ಜ್ಞಾನಾತ್ ಸ್ವಾಧಿಷ್ಠಾನ ಸಮುದ್ಭವಃ | ಸ್ವಾಧಿಷ್ಠಾನಮನೋ ಜ್ಞಾನಾತ್ ಆಧಾರಂ ಚಾಪಿ ಜಾಯತೇ | ಇತಿ ಚಕ್ರೋದ್ಭವಜ್ಞಾನಂ ದುರ್ಲಭಂ ಕಮಲಾನನೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.