ಇನ್ನೊಂದು ಪ್ರಕಾರದ ಚಕ್ರೋತ್ಪತ್ಯವೆಂತೆಂದಡೆ:
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಪಶ್ಚಿಮಭಾಗದಲ್ಲಿ ಅಣುಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ದಕ್ಷಿಣಭಾಗದಲ್ಲಿ ಪಶ್ಚಿಮಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ವಾಮಭಾಗದಲ್ಲಿ ಶಿಖಾಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ಪೂರ್ವಭಾಗದಲ್ಲಿ ಬ್ರಹ್ಮಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ಹೃದಯದಲ್ಲಿ ಕೋದಂಡಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ಜ್ಯೋತಿರೂಪದಲ್ಲಿ ಆಜ್ಞಾಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ದಕ್ಷಿಣಾಕಾರದಲ್ಲಿ ವಿಶುದ್ಧಿಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಾಕಾರದಲ್ಲಿ ಅನಾಹತಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಮಣಿಪೂರಕಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ಸ್ವಾಧಿಷ್ಠಾನಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಆಧಾರಚಕ್ರ ಉತ್ಪತ್ಯವಾಯಿತ್ತು.
ಆ ಪ್ರಣವದ ಮಹಾಪ್ರಕಾಶದಲ್ಲಿ ಪರಚಕ್ರ ಮೊದಲಾಗಿ
ನಿಷ್ಕಲಚಕ್ರಕಡೆಯಾಗಿ
ನವಚಕ್ರಂಗಳುತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಶ್ರೀಮಹಾದೇವ ಉವಾಚ:
ಓಂಕಾರಪಶ್ಚಿಮಾಂಗತ್ವೇ ಅಣುಚಕ್ರಂ ಚ ಜಾಯತೇ |
ಓಂಕಾರ ದಕ್ಷಿಣೇ ಭಾಗೇ ಪಶ್ಚಿಮಂ ಚೋದ್ಭವಂ ಸದಾ ||
ಓಂಕಾರ ವಾಮಭಾಗೇ ಚ | ಶಿಖಾಚಕ್ರಂ ಚ ಜಾಯತೇ |
ಓಂಕಾರಪೂರ್ವಭಾಗೇ ತು ಬ್ರಹ್ಮಚಕ್ರಸಮುದ್ಭವಃ ||
ಓಂಕಾರಹೃದಯಂಚೈವ ಕೋದಂಡಚಕ್ರೋದ್ಭವಃ |
ಓಂಕಾರಜ್ಯೋತಿರೂಪೇ ಚ ಆಜ್ಞಾಚಕ್ರೇಷು ಜಾಯತೇ ||
ಓಂಕಾರದರ್ಪಣಾಕಾರೇ ವಿಶುದ್ಧಿ ಚಕ್ರಸಮುದ್ಭವಃ |
ಓಂಕಾರ ಅರ್ಧಚಂದ್ರೇಶ್ಚ ಅನಾಹತಚಕ್ರೋ ಭವೇತ್ ||
ಓಂಕಾರಕುಂಡಲಾಕಾರೇ ಮಣಿಪೂರಂ ಚ ಜಾಯತೇ |
ಓಂಕಾರದಂಡರೂಪೇ ಚ ಸ್ವಾಧಿಷ್ಠಾನಂ ಚ ಜಾಯತೇ ||
ಓಂಕಾರತಾರಕಾರೂಪೇ ಆಧಾರಂ ಚಾಪಿ ಜಾಯತೇ |
ಓಂಕಾರಪ್ರಭವಂಚೈವ ನವಚಕ್ರಂ ಚ ಜಾಯತೇ |
ಇತಿ ಚಕ್ರಸಮುತ್ಪನ್ನಂ ಸುಸೂಕ್ಷ್ಮಂ ಕಮಲಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innondu prakārada cakrōtpatyaventendaḍe:
Akhaṇḍa jyōtirmayavāgiha gōḷakākāra praṇavada
paścimabhāgadalli aṇucakra utpatyavāyittu.
Ā praṇavada dakṣiṇabhāgadalli paścimacakra utpatyavāyittu.
Ā praṇavada vāmabhāgadalli śikhācakra utpatyavāyittu.
Ā praṇavada pūrvabhāgadalli brahmacakra utpatyavāyittu.
Ā praṇavada hr̥dayadalli kōdaṇḍacakra utpatyavāyittu.
Ā praṇavada jyōtirūpadalli ājñācakra utpatyavāyittu.
Ā praṇavada dakṣiṇākāradalli viśud'dhicakra utpatyavāyittu.
Ā praṇavada ardhacandrākāradalli anāhatacakra utpatyavāyittu.
Ā praṇavada kuṇḍalākāradalli maṇipūrakacakra utpatyavāyittu.
Ā praṇavada daṇḍasvarūpadalli svādhiṣṭhānacakra utpatyavāyittu.
Ā praṇavada tārakasvarūpadalli ādhāracakra utpatyavāyittu.
Ā praṇavada mahāprakāśadalli paracakra modalāgi
niṣkalacakrakaḍeyāgi
navacakraṅgaḷutpatyavāyittu nōḍā.
Idakke śrīmahādēva uvāca:
Ōṅkārapaścimāṅgatvē aṇucakraṁ ca jāyatē |
Ōṅkāra dakṣiṇē bhāgē paścimaṁ cōdbhavaṁ sadā ||
ōṅkāra vāmabhāgē ca | śikhācakraṁ ca jāyatē |
ōṅkārapūrvabhāgē tu brahmacakrasamudbhavaḥ ||
ōṅkārahr̥dayan̄caiva kōdaṇḍacakrōdbhavaḥ |
ōṅkārajyōtirūpē ca ājñācakrēṣu jāyatē ||
ōṅkāradarpaṇākārē viśud'dhi cakrasamudbhavaḥ |
ōṅkāra ardhacandrēśca anāhatacakrō bhavēt ||
ōṅkārakuṇḍalākārē maṇipūraṁ ca jāyatē |
Ōṅkāradaṇḍarūpē ca svādhiṣṭhānaṁ ca jāyatē ||
ōṅkāratārakārūpē ādhāraṁ cāpi jāyatē |
ōṅkāraprabhavan̄caiva navacakraṁ ca jāyatē |
iti cakrasamutpannaṁ susūkṣmaṁ kamalānanē ||''
intendudāgi,
apramāṇakūḍalasaṅgamadēvā