Index   ವಚನ - 408    Search  
 
ಗುದಸ್ಥಾನದಲ್ಲಿ ಆಧಾರಚಕ್ರ ಉತ್ಪತ್ಯವಾಯಿತ್ತು. ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ ನ್ಯಾಸವಾಗಿಹುದು. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ ನ್ಯಾಸವಾಗಿಹುದು. ಹೃದಯಸ್ಥಾನದಲ್ಲಿ ಅನಾಹತಚಕ್ರ ನ್ಯಾಸವಾಗಿಹುದು. ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ ನ್ಯಾಸವಾಗಿಹುದು. ಭ್ರೂಮಧ್ಯದಲ್ಲಿ ಆಜ್ಞಾಚಕ್ರ ನ್ಯಾಸವಾಗಿಹುದು. ಆ ಆಜ್ಞಾಚಕ್ರದಮೇಲೆ ನಿಷಾದಚಕ್ರ ನ್ಯಾಸವಾಗಿಹುದು. ಆ ನಿಷಾದಚಕ್ರದಮೇಲೆ ಸೃಷ್ಟಿಚಕ್ರ ನ್ಯಾಸವಾಗಿಹುದು. ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ನ್ಯಾಸವಾಗಿಹುದು. ಶಿಖಾಗ್ರದಲ್ಲಿ ಶಿಖಾಚಕ್ರ ನ್ಯಾಸವಾಗಿಹುದು. ಪಶ್ಚಿಮದಲ್ಲಿ ಪಶ್ಚಿಮಚಕ್ರ ಉತ್ಪತ್ಯವಾಯಿತ್ತು. ಆ ಪಶ್ಚಿಮಚಕ್ರದಮೇಲೆ ಅಣುಚಕ್ರ ನ್ಯಾಸವಾಗಿಹುದು. ಆ ಅಣುಚಕ್ರದಮೇಲೆ ನಿಃಕಳಚಕ್ರ ನ್ಯಾಸವಾಗಿಹುದು. ಆ ನಿಷ್ಕಳಚಕ್ರದಮೇಲೆ ನಿರಾಳಚಕ್ರ ನ್ಯಾಸವಾಗಿಹುದು. ಆ ನಿರಾಳಚಕ್ರದಮೇಲೆ ಸುರಾಳಚಕ್ರ ನ್ಯಾಸವಾಗಿಹುದು. ಆ ಸುರಾಳಚಕ್ರದಮೇಲೆ ಕಳಾಚಕ್ರ ನ್ಯಾಸವಾಗಿಹುದು. ಆ ಕಳಾಚಕ್ರದಮೇಲೆ ಬಿಂದುಚಕ್ರ ನ್ಯಾಸವಾಗಿಹುದು. ಆ ಬಿಂದುಚಕ್ರದಮೇಲೆ ನಾದಚಕ್ರ ನ್ಯಾಸವಾಗಿಹುದು. ಆ ನಾದಚಕ್ರದಮೇಲೆ ಗುರುಚಕ್ರ ನ್ಯಾಸವಾಗಿಹುದು. ಆ ಗುರುಚಕ್ರದಮೇಲೆ ಚರಚಕ್ರ ನ್ಯಾಸವಾಗಿಹುದು. ಆ ಚರಚಕ್ರದಮೇಲೆ ಪರಚಕ್ರ ನ್ಯಾಸವಾಗಿಹುದು ನೋಡಾ. ಇದಕ್ಕೆ ಈಶ್ವರ ಉವಾಚ: ಆಧಾರಂ ಚ ಗುದಸ್ಥಾನೇ ಸ್ವಾಧಿಷ್ಠಾ ಲಿಂಗಕ್ಷೇತ್ರಕೇ | ಮಣಿಪೂರಂ ಚ ನಾಭೌ ಚ ಹೃದಿಸ್ಥಾನೇ ಚ ಅನಾಹತಂ | ವಿಶುದ್ಧೌ ಕಂಠದೇಶೇ ಚ ಭ್ರೂಮಧ್ಯೇ ಆಜ್ಞಾಚಕ್ರಕಂ | ನಿಷಾಧೇ ಸೃಷ್ಠಿಚಕ್ರಕಂ ಪಶ್ಚಿಮಾದಿ ಪರಾತ್ತಂಚ | ದಶಚಕ್ರಂ ನಿರಾಶ್ರಯಾಃ | (?) ಓಂಕಾರ ಹೃದಯಶ್ಚೈವಂ ಕೋದಂಡಚಕ್ರಮಾಶ್ರಿತಾಃ | ಇತಿ ಚಕ್ರನ್ಯಾಸಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.