Index   ವಚನ - 436    Search  
 
ಮಹಾತತ್ವದಲ್ಲಿ- 'ಅರ್ಬುದಾಕ್ಷರೋ ಭವತಿ | ಓಂ ಮಹಾತ್ಮಾ ದೇವತಾ |' ಎಂದುದು ಶ್ರುತಿ. ಆ ಮಹಾಜ್ಞಾನದಲ್ಲಿ ಅರ್ಬುದದಳಾಕ್ಷರುತ್ಪತ್ಯವಾಗಿ ಸುರಾಳಚಕ್ರದ ಅರ್ಬುದದಳ ಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.