Index   ವಚನ - 435    Search  
 
ನಿರಾಮಯತತ್ವದಲ್ಲಿ- 'ಖರ್ವದಳಾಕ್ಷರೋ ಭವತಿ | ಓಂ ನಿರಾಮಯಾತ್ಮಾ ದೇವತಾ' | ಎಂದುದು ಶ್ರುತಿ. ಆ ನಿರಾಳತತ್ವದಲ್ಲಿ ಖರ್ವದಳಾಕ್ಷರುತ್ಪತ್ಯವಾಗಿ ಕಲಾಚಕ್ರದ ಖರ್ವದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.