Index   ವಚನ - 438    Search  
 
ನಿಷ್ಕಳತತ್ವದಲ್ಲಿ- 'ಲಕ್ಷದಳಾಕ್ಷರೋ ಭವತಿ | ಓಂ ನಿಷ್ಕಳಾತ್ಮಾ ದೇವತಾ |' ಎಂದುದು ಶ್ರುತಿ. ಆ ನಿಷ್ಕಳತತ್ವದಲ್ಲಿ ಲಕ್ಷ ಅಕ್ಷರಂಗಳುತ್ಪತ್ಯವಾಗಿ ನಿಷ್ಕಳಚಕ್ರದ ಲಕ್ಷದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.