ಇನ್ನು ಆ ಪ್ರಣವದ ತಾರಕಾಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ
ಜ್ಯೋತಿಸ್ವರೂಪದ ಕಾಂತಿಯದೆಂತೆಂದಡೆ:
ಆ ಪ್ರಣವದ ತಾರಕಾಸ್ವರೂಪವು
ಅರುವತ್ತುನೂರುಕೋಟಿ ಸೂರ್ಯಚಂದ್ರಾಗ್ನಿ
ಪ್ರಕಾಶವಾಗಿಹುದು ನೋಡಾ.
ಆ ಪ್ರಣವದ ದಂಡಸ್ವರೂಪವು
ಎಪ್ಪತ್ತುನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ಕುಂಡಲಾಕಾರವು
ಎಂಬತ್ತುನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ಅರ್ಧಚಂದ್ರಕಸ್ವರೂಪವು
ತೊಂಬತ್ತುನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ದರ್ಪಣಾಕಾರವು
ಸಾವಿರದ ನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ಜ್ಯೋತಿಸ್ವರೂಪವು
ಅನೇಕಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ā praṇavada tārakāsvarūpa
kuṇḍalākāra ardhacandraka darpaṇākāra
jyōtisvarūpada kāntiyadentendaḍe:
Ā praṇavada tārakāsvarūpavu
aruvattunūrukōṭi sūryacandrāgni
prakāśavāgihudu nōḍā.
Ā praṇavada daṇḍasvarūpavu
eppattunūrukōṭi sūryacandrāgniprakāśavāgihudu.
Ā praṇavada kuṇḍalākāravu
embattunūrukōṭi sūryacandrāgniprakāśavāgihudu.
Ā praṇavada ardhacandrakasvarūpavu
tombattunūrukōṭi sūryacandrāgniprakāśavāgihudu.
Ā praṇavada darpaṇākāravu
sāvirada nūrukōṭi sūryacandrāgniprakāśavāgihudu.
Ā praṇavada jyōtisvarūpavu
anēkakōṭi sūryacandrāgniprakāśavāgihudu nōḍā
apramāṇakūḍalasaṅgamadēvā.