ಮಣಿಪೂರಕಚಕ್ರದಲ್ಲಿಹ ಶಿವಲಿಂಗವು
ಜ್ಞಾನಕಲೆಗಳೊಡನೆ ಕೂಡಿದ ರೂಪದಿಂದ ಮಿಗೆ ಒಪ್ಪುತಿರ್ದಂಥಾದಾಗಿ
ಒಂದು ಮುಖಮಾಗಿ ಮಿಗೆ ಶಾಂತವಾದ ದಿವ್ಯತೇಜಃಪುಂಜವನು
ಅಹಂಕಾರಕ್ಕೆ ಸ್ಥಾನವಪ್ಪ ಪ್ರಪಂಚದಲ್ಲಿ
ತನ್ನ ಇಚ್ಛಾಕ್ತಿಯಿಂದ ವ್ಯಾಪಿಸಲುಪಟ್ಟ ಮೂರ್ತೀಕರಿಸಿದ
ತತ್ವವಾದ ಶಿವಲಿಂಗವಿಹುದು ನೋಡಾ.
ಇದಕ್ಕೆ ಮಹಾವಾತುಲಾಗಮೇ: ವೃತ್ತ-
ವಿದ್ಯಾಕಲಾಕಲಿತರೂಪಸುಶೋಭಮಾನಂ
ದಿವ್ಯಾಂ ಪ್ರಭಾಫಲವುಮೇಕಮುಖಂ ಪ್ರಶಾಂತಂ ||
ಇಚ್ಛಾಸ್ವಶಕ್ತಿಪರಿಜೃಂಭಿತಮೂರ್ತಿತತ್ವಂ
ವ್ಯಕ್ತ ಹ್ರೂಹಂಕೃತಿಪದೇ ಶಿವಲಿಂಗಮಾಹುಃ || ''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Maṇipūrakacakradalliha śivaliṅgavu
jñānakalegaḷoḍane kūḍida rūpadinda mige opputirdanthādāgi
ondu mukhamāgi mige śāntavāda divyatējaḥpun̄javanu
ahaṅkārakke sthānavappa prapan̄cadalli
tanna icchāktiyinda vyāpisalupaṭṭa mūrtīkarisida
tatvavāda śivaliṅgavihudu nōḍā.
Idakke mahāvātulāgamē: Vr̥tta-
vidyākalākalitarūpasuśōbhamānaṁ
divyāṁ prabhāphalavumēkamukhaṁ praśāntaṁ ||
icchāsvaśaktiparijr̥mbhitamūrtitatvaṁ
vyakta hrūhaṅkr̥tipadē śivaliṅgamāhuḥ ||''
intendudāgi, apramāṇakūḍalasaṅgamadēvā.