Index   ವಚನ - 464    Search  
 
ಸ್ವಾಧಿಷ್ಠಾನಚಕ್ರದಲ್ಲಿಹ ಗುರುಲಿಂಗಸ್ಥಲವನು ಕರ್ತೃತ್ವವಾಗಿಯು ತನ್ನ ಜ್ಞಾನಶಕ್ತಿಯ ವೈಭವದಿಂದಲು ಸಮಸ್ತವಾದ ಉಪದೇಶವಿಧಾನ ಶಾಸ್ತ್ರಂಗಳಲ್ಲಿ ಮಾಡಲುಪಟ್ಟ ಆಸ್ಪದವನುಳ್ಳುದಾಗಿಯೂ ಕಡೆಯಿಲ್ಲದ ಸುಖಸಮುದ್ರನಾಗಿಯೂ ಬುದ್ಧಿತತ್ವದ ಸ್ಥಲದ ಪ್ರತಿಷ್ಠಿತವಾಗಿಹ ಗುರುಲಿಂಗವಿಹುದು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ಸ್ವಜ್ಞಾನಶಕ್ತಿವಿಭವಾದಿ ಕರ್ತೃತ್ವಂ | ಸರ್ವೋಪದೇಶ ವಿಧಿತಂತ್ರಕೃತಂ ಪ್ರತಿಷ್ಠಂ | ತೇಜೋನಿಧಿಃ ಪರಮಪಾರಸುಖಾಂಬುಶಿ || ಬುದ್ಧೇಃ ಪದೇ ವಿನಿಹಿತಂ ಗುರುಲಿಂಗಮಾಹುಃ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.