Index   ವಚನ - 466    Search  
 
ಅನಾಹತಚಕ್ರದಲ್ಲಿಯ ಜಂಗಮಲಿಂಗವು ಅಂತರಂಗದೊಡನೆ ಕೂಡಿ ವರ್ತಿಸುವುದಾಗಿ ಬಹಿರಂಗ ಸಹಿತವಾಗಿ ಅಮೂರ್ತವಹ ವಸ್ತುತತ್ವವಾಗಿ ಅಕ್ಷರವಪ್ಪ ಪ್ರಕೃತಿಗಿಂದಲು, ಪರತತ್ವವೆಂಬ ಹೆಸರನುಳ್ಳ ಜ್ಯೋತಿಸ್ವರೂಪನಪ್ಪ ಪುರುಷನ ತನ್ನ ಆತ್ಮಮೂರ್ತಿಯಂಥಾ ಆದಿಶಕ್ತಿಯೊಡನೆ ಕೂಡಿದಂತಾದಾಗಿ, ಮನಸ್ಸಿನಿಂದವೆ ಎಲ್ಲಾಗಳು ಧ್ಯಾನವ ಮಾಡಲು ತಕ್ಕಂಥಾಚಾರಲಿಂಗವೆಂದು ಆಪ್ತವಾದ ಬುದ್ಧಿಯುಳ್ಳ ಮಹಾತ್ಮರು ಹೇಳುತ್ತಿಹರು ನೋಡಾ ಇದಕ್ಕೆ ಮಹಾವಾತುಲಾಗಮೇ: ವೃತ್ತ- ಸಾಭ್ಯಾಂತರಂ ಸಬಹಿರಂಗಮಮೂರ್ತಿತತ್ವಂ ಜ್ಯೋತಿರ್ಮಯಂ ಪುರುಷಮಕ್ಷರತಃ ಪರಾಖ್ಯಂ | ಸ್ವಾತ್ಮಾದಿಶಕ್ತಿಘಟಿತಂ ಮನಸೈವ ನಿತ್ಯಂ ಧ್ಯಾತವ್ಯರೂಪಮಿತಿ ಯಶ್ಚರಲಿಂಗಮಾಹುಃ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.