Index   ವಚನ - 465    Search  
 
ಮಣಿಪೂರಕಚಕ್ರದಲ್ಲಿಹ ಶಿವಲಿಂಗವು ಜ್ಞಾನಕಲೆಗಳೊಡನೆ ಕೂಡಿದ ರೂಪದಿಂದ ಮಿಗೆ ಒಪ್ಪುತಿರ್ದಂಥಾದಾಗಿ ಒಂದು ಮುಖಮಾಗಿ ಮಿಗೆ ಶಾಂತವಾದ ದಿವ್ಯತೇಜಃಪುಂಜವನು ಅಹಂಕಾರಕ್ಕೆ ಸ್ಥಾನವಪ್ಪ ಪ್ರಪಂಚದಲ್ಲಿ ತನ್ನ ಇಚ್ಛಾಕ್ತಿಯಿಂದ ವ್ಯಾಪಿಸಲುಪಟ್ಟ ಮೂರ್ತೀಕರಿಸಿದ ತತ್ವವಾದ ಶಿವಲಿಂಗವಿಹುದು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ವಿದ್ಯಾಕಲಾಕಲಿತರೂಪಸುಶೋಭಮಾನಂ ದಿವ್ಯಾಂ ಪ್ರಭಾಫಲವುಮೇಕಮುಖಂ ಪ್ರಶಾಂತಂ || ಇಚ್ಛಾಸ್ವಶಕ್ತಿಪರಿಜೃಂಭಿತಮೂರ್ತಿತತ್ವಂ ವ್ಯಕ್ತ ಹ್ರೂಹಂಕೃತಿಪದೇ ಶಿವಲಿಂಗಮಾಹುಃ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.