ಇನ್ನೊಂದು ಪ್ರಕಾರದ ಕಲಾನ್ಯಾಸವದೆಂತೆಂದೊಡೆ:
ಆಧಾರಚಕ್ರದಲ್ಲಿ ನಿವೃತ್ತಿಕಲೆ ಇಹುದು.
ಸ್ವಾಧಿಷ್ಠಾನಚಕ್ರದಲ್ಲಿ ಪ್ರತಿಷ್ಠಾಕಲೆ ಇಹುದು.
ಮಣಿಪೂರಕಚಕ್ರದಲ್ಲಿ ವಿದ್ಯಾಕಲೆ ಇಹುದು.
ಅನಾಹತಚಕ್ರದಲ್ಲಿ ಶಾಂತಿಕಲೆ ಇಹುದು.
ವಿಶುದ್ಧಿಚಕ್ರದಲ್ಲಿ ಶಾಂತ್ಯತೀತೋತ್ತರಕಲೆ ಇಹುದು ನೋಡಾ.
ಇದಕ್ಕೆ ಆದಿತ್ಯಸೂತ್ರೇ:
ಆಧಾರೇ ನಿವೃತ್ತೀ ಚ ಸ್ವಾಧಿಷ್ಠಾನೇ ಪ್ರತಿಷ್ಠಿತಂ |
ವಿದ್ಯಾ ಚ ಮಣಿಪೂರೇ ಚ ಕಲಾಶಾಂತಿರನಾಹತೇ ||
ಶಾಂತ್ಯತೀತಂ ವಿಶುದ್ಧೌ ಚ ಆಜ್ಞಾಚಕ್ರೇ ಮಹತ್ಕಲಾ |
ಇತಿ ಷಷ್ಠ ಕಲಾನ್ಯಾಸಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innondu prakārada kalān'yāsavadentendoḍe:
Ādhāracakradalli nivr̥ttikale ihudu.
Svādhiṣṭhānacakradalli pratiṣṭhākale ihudu.
Maṇipūrakacakradalli vidyākale ihudu.
Anāhatacakradalli śāntikale ihudu.
Viśud'dhicakradalli śāntyatītōttarakale ihudu nōḍā.
Idakke ādityasūtrē:
Ādhārē nivr̥ttī ca svādhiṣṭhānē pratiṣṭhitaṁ |
vidyā ca maṇipūrē ca kalāśāntiranāhatē ||
śāntyatītaṁ viśud'dhau ca ājñācakrē mahatkalā |
iti ṣaṣṭha kalān'yāsaṁ susūkṣmaṁ śruṇu pārvatī ||''
intendudāgi, apramāṇakūḍalasaṅgamadēvā