Index   ವಚನ - 472    Search  
 
ಶಾಂತ್ಯತೀತೋತ್ತರಕಲೆಯಲ್ಲಿ ಮಹಾಸಾದಾಖ್ಯ ಉತ್ಪತ್ಯವಾಯಿತ್ತು. ಶಾಂತ್ಯತೀತಕಲೆಯಲ್ಲಿ ಶಿವಸಾದಾಖ್ಯ ಉತ್ಪತ್ಯವಾಯಿತ್ತು. ಶಾಂತಿಕಲೆಯಲ್ಲಿ ಅಮೂರ್ತಿಸಾದಾಖ್ಯ ಉತ್ಪತ್ಯವಾಯಿತ್ತು. ವಿದ್ಯಾಕಲೆಯಲ್ಲಿ ಮೂರ್ತಿಸಾದಾಖ್ಯ ಉತ್ಪತ್ಯವಾಯಿತ್ತು. ಪ್ರತಿಷ್ಠಾಕಲೆಯಲ್ಲಿ ಕರ್ತೃಸಾದಾಖ್ಯ ಉತ್ಪತ್ಯವಾಯಿತ್ತು. ನಿವೃತ್ತಿಕಲೆಯಲ್ಲಿ ಕರ್ಮಸಾದಾಖ್ಯ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಉತ್ತರವಾತುಲಾಗಮೇ: ಶಾಂತ್ಯತೀತೋತ್ತರೇ ಚೈವ ಮಹಾಸಾದಾಖ್ಯಮುದ್ಭವಂ | ಶಾಂತ್ಯತೀತಕಲಾಯಾಂ ಶಿವಸಾದಾಖ್ಯಮುದ್ಭವಂ || ಅಮೂರ್ತಸಾದಾಖ್ಯಂ ದೇವಿ ಶಾಂತಿಕಲಾಯಾಂ ಉದ್ಭವಂ | ಮೂರ್ತಿಸಾದಾಖ್ಯಕಂ ಚೈವ ವಿದ್ಯಾಕಲಾಯಾಂ ಉದ್ಭವಂ || ಕರ್ತೃಸಾದಾಖ್ಯಕಂ ಚೈವ ಪ್ರತಿಷ್ಠೇಚ ಸಮುದ್ಭವಂ | ಕರ್ಮಸಾದಾಖ್ಯಕಂ ಚೈವ ನಿವೃತ್ತಾ ಚ ಸಮುದ್ಭವಂ || ಷಡ್ವಿಧಸಾದಾಖ್ಯಂ ದೇವಿ ಷಟ್ಕಲಾಯಾಂ ಚ ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.